ಶಿವಮೊಗ್ಗ:ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಇಡೀ ರಾಜ್ಯ ಶೋಕ ಸಾಗರದಲ್ಲಿ ಮುಳುಗಿದೆ. ಈ ನಡುವೆ ರಿಪ್ಪನ್ಪೇಟೆ ನಗರ ಸಂಪೂರ್ಣ ಬಂದ್ ಆಗಿದೆ. ಎಲ್ಲಾ ವ್ಯಾಪಾರಸ್ಥರು ತಮ್ಮ ಅಂಗಡಿ ಬಂದ್ ಮಾಡಿದ್ದು, ಪಟ್ಟಣ ಖಾಲಿ ಖಾಲಿಯಾಗಿದೆ.
ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ: ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್ - ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್
ಹೃದಯಾಘಾತದಿಂದ ಅಗಲಿದ ನಟ ಪುನೀತ್ ರಾಜ್ಕುಮಾರ್ಗೆ ಗಣ್ಯರು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್ ಆಗಿದ್ದು, ಕೇವಲ ಮೆಡಿಕಲ್ ಶಾಪ್ಗಳು ಮಾತ್ರ ತೆರೆದಿವೆ. ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಜನತೆ ನಮಿಸಿದ್ದಾರೆ.
![ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ: ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್ rippenpete-town-closed-for-mourning-of-respect-to-puneeth-rajkumar](https://etvbharatimages.akamaized.net/etvbharat/prod-images/768-512-13500597-thumbnail-3x2-smg.jpg)
ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ: ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್
ಪುನೀತ್ ರಾಜ್ಕುಮಾರ್ಗೆ ಶ್ರದ್ಧಾಂಜಲಿ: ರಿಪ್ಪನ್ಪೇಟೆ ಪಟ್ಟಣ ಸಂಪೂರ್ಣ ಬಂದ್
ಪಟ್ಟಣದ ಸರ್ಕಲ್ನಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಲಾಗಿದೆ. ಪಟ್ಟಣದ ಮೆಡಿಕಲ್ ಶಾಪ್ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಬಂದ್ ಮಾಡಲಾಗಿದ್ದು, ಕೇವಲ ಬೆರಳೆಣಿಕೆಯ ಬಸ್ ಸಂಚಾರ ಮಾಡುತ್ತಿವೆ.