ಕರ್ನಾಟಕ

karnataka

ETV Bharat / state

ಅಸ್ಸಾಂ ರೈಫಲ್ಸ್​ನಲ್ಲಿದ್ದ ರಿಪ್ಪನ್‌ಪೇಟೆಯ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ - Home Minister Araga Gyanendra

ಭಾರತೀಯ ಸೇನೆಯ ಅಸ್ಸಾಂ ರೈಫಲ್ಸ್​ನಲ್ಲಿದ್ದ ಹೊಸನಗರ ತಾಲೂಕು ರಿಪ್ಪನಪೇಟೆಯ ಯೋಧ ಆತ್ಮಹತ್ಯೆಗೆ ಶರಣಾಗಿದ್ದಾರೆ.

Warrior Sandeep
ಯೋಧ ಸಂದೀಪ್

By

Published : Mar 21, 2023, 11:59 AM IST

ಶಿವಮೊಗ್ಗ:ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹೊಸನಗರ ತಾಲೂಕು ರಿಪ್ಪನ್‌ಪೇಟೆಯ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ. ಶಬರೀಶ್ ನಗರದ ನಿವಾಸಿ ಸಂದೀಪ್(27) ಸಾವಿಗೀಡಾದವರು. ಅಸ್ಸಾಂ ರೈಫನ್ಸ್​ 4ರ ವಿಭಾಗದಲ್ಲಿ ಇವರು ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ಕರ್ತವ್ಯದಲ್ಲಿದ್ದಾಗಲೇ ತನ್ನ ಗನ್​ನಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಇಂದು ಅಸ್ಸಾಂನಿಂದ ಶವ ರವಾನೆಯಾಗಲಿದ್ದು ರಾತ್ರಿ ಬೆಂಗಳೂರು ತಲುಪಲಿದೆ. ನಾಳೆ ರಿಪ್ಪನ್‌ಪೇಟೆಗೆ ಆಗಮಿಸಲಿದೆ ಎಂದು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿ ಸುಭಾಷ್ ಈಟಿವಿ ಭಾರತ್​​ಗೆ ತಿಳಿಸಿದರು.

ಸಂದೀಪ್ ಅವರದ್ದು ಬಡ ಕುಟುಂಬ. ತಂದೆ ಹಾಗೂ ಅಣ್ಣ ಕೂಲಿ‌ ಕೆಲಸದಿಂದ ಜೀವನ ನಡೆಸುತ್ತಿದ್ದಾರೆ. ತಾಯಿ ವಿನೋದಮ್ಮ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಸದಸ್ಯೆ. ಸಂದೀಪ್ ಇತ್ತೀಚೆಗೆ ಮನೆ ನಿರ್ಮಾಣಕ್ಕೆ ಸಾಲ ಮಾಡಿದ್ದರು. ಸಾಲದ ಪ್ರಮಾಣ ಹೆಚ್ಚಾದ ಕಾರಣ ಮನ ನೊಂದಿದ್ದರು ಎನ್ನಲಾಗಿದೆ.

ಯೋಧ ಸಂದೀಪ್

ಗೃಹ ಸಚಿವರ ಭೇಟಿ, ಸಾಂತ್ವನ:ಸಂದೀಪ್ ಮನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ. ಸಂದೀಪ್‌ ದೇಶ ಸೇವೆಗೆ ಹೋಗಿದ್ದು, ಈ ರೀತಿ ಸಾವನ್ನಪ್ಪಿದ್ದು ದುರಂತ. ಯೋಧನ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಹೆದ್ದಾರಿ ಮೇಲೆ ಕಾನ್ಸಟೇಬಲ್ ಮೃತದೇಹ ಪತ್ತೆ

ಸಾಲಬಾಧೆ ಯೋಧ ಆತ್ಮಹತ್ಯೆ:ಸಾಲಬಾಧೆ ತಾಳಲಾರದೇ ನಿವೃತ್ತ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲ ಗ್ರಾಮದಲ್ಲಿ ಜ.16ರಂದು ನಡೆದಿತ್ತು. ರೇವಣಸಿದ್ದಪ್ಪ ಗಾಣಿಗೇರ ಅಲಿಯಾಸ್ ದೇಸಾಯಿ ಮೃತರು. ಸೇನೆಯಿಂದ ನಿವೃತ್ತರಾದ ಮೇಲೆ ಗ್ರಾಮದಲ್ಲಿ ಸಾಲ ಮಾಡಿ ಜಮೀನು ಖರೀದಿಸಿದ್ದು, ಸಾಲ ತೀರಿಸಲಾಗದೇ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ದೂರು ನೀಡಲು ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ಸ್ಪೆಕ್ಟರ್? ಡಿಸಿಪಿಗೆ ತನಿಖಾ ವರದಿ ಸಲ್ಲಿಕೆ

ವಿಶೇಷ ಕಾರ್ಯಪಡೆ ಯೋಧ ಆತ್ಮಹತ್ಯೆ:ಜಾರ್ಖಂಡ್ ವಿಶೇಷ ಕಾರ್ಯಪಡೆ ಯೋಧರೊಬ್ಬರ ಆತ್ಮಹತ್ಯೆ ಪ್ರಕರಣ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು. ಪಲಮು ಜಿಲ್ಲೆಯ ಲೆಸ್ಲಿಗಂಜ್‌ನಲ್ಲಿರುವ ಝಾಪ್ 8 ಕಾರ್ಪ್ಸ್ ಮುಖ್ಯ ಕಚೇರಿ ಆವರಣದಲ್ಲಿ ಅನೀಶ್ ವರ್ಮಾ ಎಂಬ ಯೋಧ ಸಾವಿಗೆ ಶರಣಾಗಿದ್ದರು. ಇದರಿಂದ ಆಕ್ರೋಶಗೊಂಡ ಇತರ ಸೈನಿಕರು ಅಧಿಕಾರಿಗಳ ಮೇಲೆ ದಾಳಿ ಮಾಡಿ ಥಳಿಸಿದ್ದರು. 2013ರಲ್ಲಿ ಭಾರತೀಯ ರಿಸರ್ವ್ ಬೆಟಾಲಿಯನ್ (ಆರ್​ಐಬಿ)ಯ ಸೈನಿಕರಾಗಿ ಅನೀಶ್ ವರ್ಮಾ ನೇಮಕಗೊಂಡಿದ್ದರು. 2015ರಲ್ಲಿ ಜಾರ್ಖಂಡ್ ಜಾಗ್ವಾರ್​ನಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ:ಇಂಜಾಜ್ ಇಂಟರ್‌ನ್ಯಾಷನಲ್ ಕಂಪನಿ‌ಯ ₹20 ಕೋಟಿ‌ ಮೌಲ್ಯದ ಸ್ಥಿರಾಸ್ತಿ ಜಪ್ತಿ

ABOUT THE AUTHOR

...view details