ಶಿವಮೊಗ್ಗ:ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರ ನೇತೃತ್ವದ ಬೆಂಬಲಿತ 'ಸ್ಪಂದನ' ತಂಡ 'ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ'ದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಎಂ. ಅವರು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ಚುನಾವಣೆ ಫಲಿತಾಂಶ ಪ್ರಕಟ - Spandana team candidates win
ಇದೇ ತಿಂಗಳು 10 ರಂದು ನಡೆದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರ ನೇತೃತ್ವದ ಬೆಂಬಲಿತ 'ಸ್ಪಂದನ' ತಂಡ 'ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ'ದ ತಾಲೂಕು ಶಾಖೆ ಕಾರ್ಯಕಾರಿ ಸಮಿತಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ.
ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಇದೇ ತಿಂಗಳು 10 ರಂದು ನಡೆದ ಚುನಾವಣೆಯಲ್ಲಿ ಶಿವಮೊಗ್ಗ ತಾಲೂಕಿನ 24 ಸ್ಥಾನಗಳ ಪೈಕಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರ ಬೆಂಬಲಿತ ಸ್ಪಂದನ ತಂಡ 10 ಸ್ಥಾನಗಳಿಸಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಕಾರ್ಯಕಾರಿ ಸಮಿತಿ ರಚನೆಗೊಂಡಿದೆ ಎಂದರು.
ಹೊಸ ಕಾರ್ಯಕಾರಿ ಸಮಿತಿ 2020-24 ರ ಸಾಲಿನಲ್ಲಿ ಅನೇಕ ಧ್ಯೇಯೋದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದ ಎನ್ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸುವುದು, ಸಂಪೂರ್ಣ ಆರೋಗ್ಯ ಬಾಗ್ಯ ಯೋಜನೆ ಜಾರಿಗೊಳಿಸುವುದು, ತಾಲೂಕು ಗುರುಭವನ ನಿರ್ಮಾಣ ಮಾಡುವುದು, ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು ಹೀಗೆ ಪ್ರಮುಖ ಯೋಜನೆಗಳು ನಮ್ಮ ಮುಂದಿದೆ ಅವುಗಳನ್ನು ಈಡೇರಿಸುವುದು ನಮ್ಮ ಪ್ರಮುಖ ಗುರಿ ಎಂದರು.