ಕರ್ನಾಟಕ

karnataka

ಸ್ವಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಖಂಡನೆ: ದೂರುದಾರನಿಗೆ ಠಾಣೆಗೆ ಬರುವಂತೆ ಸೂಚಿಸಿದ ಶಿವಮೊಗ್ಗ ಪೊಲೀಸ್​

By

Published : Dec 28, 2022, 11:16 AM IST

ಸ್ವಾಧ್ವಿ ಪ್ರಜ್ಞಾ ಸಿಂಗ್ ವಿರುದ್ಧ ದೂರು ದಾಖಲಿಸುವಂತೆ ಟ್ವಿಟರ್​ನಲ್ಲಿ ಮನವಿ - ಮನವಿ ಮಾಡಿದವನಿಗೆ ಠಾಣೆಗೆ ಬಂದು ದೂರು ದಾಖಲಿಸುವಂತೆ ಸೂಚನೆ - ಪ್ರಚೋಧನಾಕಾರಿ ಭಾಷಣ ಮಾಡಿದ್ದಾರೆಂದು ಆರೋಪ.

request-to-file-a-complaint-against-sadhvi-pragya-singh
ಸ್ವಾಧ್ವಿ ಪ್ರಜ್ಞಾ ಸಿಂಗ್

ಶಿವಮೊಗ್ಗ:ಹಿಂದೂ ಜಾಗರಣ ವೇದಿಕೆಯ ವತಿಯಿಂದ ನಡೆದ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆಡಿರುವ ಪ್ರಚೋದನಕಾರಿ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ತೆಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್ ಅವರಿಗೆ ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರು.

ಸ್ವಾದ್ವಿ ಪ್ರಜ್ಞಾ ಹೇಳಿದ್ದೇನು?:ನಮ್ಮ ಹೆಣ್ಣು ಮಕ್ಕಳನ್ನು ಲವ್ ಜಿಹಾದ್​ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ನಮ್ಮ ಕುಟುಂಬದ, ನಮ್ಮ ಪ್ರದೇಶದ ಹಾಗೆ ದೇಶದ ರಕ್ಷಣೆಗೆ ಸಿದ್ಧರಾಗಬೇಕು. ಆಯುಧ ಮನೆಯಲ್ಲಿ ಇಟ್ಟುಕೊಳ್ಳುವುದು ಕಾನೂನುಬಾಹಿರ ಇರಬಹುದು. ಆದರೆ, ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ಅಗತ್ಯ ಬಿದ್ದರೆ ಆಯುಧಗಳಿಗೆ ಪರವಾನಿಗೆಯನ್ನು ಇಟ್ಟುಕೊಳ್ಳಿ ಎಂದು ಕರೆ ನೀಡಿದ್ದರು.

ತೆಹಸೀನ್ ಪೂನಾವಾಲಾಗೆ ಠಾಣೆಗೆ ಬಂದು ದೂರು ದಾಖಲಿಸುವಂತೆ ನೋಟಿಸ್​ ನೀಡಿದ ಪೊಲೀಸರು

ದೂರು ದಾಖಲಿಸುವಂತೆ ಮನವಿ:ಇದೇ ವಿಚಾರವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ. ಅವರು ಸಾಮಾಜಿಕ ಸಾಸ್ಥ್ಯಕ್ಕೆ ಭಂಗ ತರುತ್ತಿದ್ದಾರೆ. ಹಾಗಾಗಿ ಎಫ್​ಐಆರ್ ದಾಖಲಿಸುವಂತೆ ಕೋರಿದ್ದರು ತೆಹಸೀನ್ ಪೂನಾವಾಲಾ ಎಂಬವರು ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್ ಅವರಿಗೆ ಟ್ವಿಟ್​ ಮಾಡಿ ಮನವಿ ಮಾಡಿದ್ದರು. ಕೋಟೆ ಠಾಣೆ ಪೊಲೀಸರು ಇಂದು ಬೆಳಗ್ಗೆ ಹನ್ನೊಂದು ಗಂಟೆಯೊಳಗೆ ಠಾಣೆಗೆ ಬಂದು ದೂರು ದಾಖಲಿಸುವಂತೆ ನೋಟಿಸ್ ನೀಡಿದ್ದರು. ಆದ್ರೆ ಹನ್ನೊಂದು ಗಂಟೆಯೊಳಗೆ ದೂರುದಾರರು ಠಾಣೆಗೆ ಬಂದಿಲ್ಲ ಎಂಬ ಮಾಹಿತಿ ಇದೆ.

ಇದನ್ನೂ ಓದಿ:ಹಿಂದೂ ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್​ ರೀತಿ ಸಿದ್ಧಗೊಳಿಸಿ: ಸಾಧ್ವಿ ಪ್ರಜ್ಞಾಸಿಂಗ್ ಕರೆ

ABOUT THE AUTHOR

...view details