ಶಿವಮೊಗ್ಗ :ಮೊನ್ನೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿ ನಡೆದ ಕಲ್ಲುಕ್ವಾರಿಯಲ್ಲಿನ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಕಲ್ಲುಕ್ವಾರಿಯಲ್ಲಿನ ಸ್ಪೋಟ ಪ್ರಕರಣ.. ಮೃತದೇಹಗಳ ಹಸ್ತಾಂತರಕ್ಕೆ ಕುಟುಂಬಸ್ಥರ ಪಟ್ಟು - ಐದು ಜನ ಕಾರ್ಮಿಕರು ಸಾವು
ನಿನ್ನೆಯಿಂದ ಈಗ ಕೋಡುತ್ತೇವೆ, ಬೆಳಗ್ಗೆ ಕೋಡುತ್ತೇವೆ ಎಂದು ಕಾಯಿಸುತ್ತಿದ್ದಾರೆ. ಹಾಗಾಗಿ, ಕಾಯಿಸಬೇಡಿ, ಮೃತ ದೇಹಗಳನ್ನು ನೀಡಿ ಎಂದು ಸಂಬಂಧಿಕರು ಜಿಲ್ಲಾಡಳಿತವನ್ನು ಗೋಗರೆಯುತ್ತಿದ್ದಾರೆ..

smg
ಸಾವನ್ನಪ್ಪಿದವರನ್ನು ಭದ್ರಾವತಿಯ ಕೆ ಹೆಚ್ ನಗರದ ಅಂತರ ಗಂಗೆಯ ನಿವಾಸಿಗಳಾದ ಪ್ರವೀಣ್,ಮಂಜುನಾಥ್ ಹಾಗೂ ರಾಯದುರ್ಗದ ಜಾವೀದ್, ಪವನ್, ರಾಜು ಎಂದು ಗುರುತಿಸಲಾಗಿದೆ. ನಿನ್ನೆಯಿಂದ ನಗರದ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿದೆ.
ಮೃತದೇಹ ನೀಡುವಂತೆ ಸಂಬಂಧಿಕರ ಒತ್ತಾಯ..
ಹಾಗಾಗಿ, ಮೃತರ ದೇಹಗಳನ್ನು ಕೂಡಲೇ ಕುಟುಂಬಸ್ಥರಿಗೆ ನೀಡುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ನಿನ್ನೆಯಿಂದ ಈಗ ಕೋಡುತ್ತೇವೆ, ಬೆಳಗ್ಗೆ ಕೋಡುತ್ತೇವೆ ಎಂದು ಕಾಯಿಸುತ್ತಿದ್ದಾರೆ. ಹಾಗಾಗಿ, ಕಾಯಿಸಬೇಡಿ, ಮೃತ ದೇಹಗಳನ್ನು ನೀಡಿ ಎಂದು ಸಂಬಂಧಿಕರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.