ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಮಲೆನಾಡು ಅಕ್ಷರಶಃ ಮಳೆಯ ನಾಡಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಹೊಸನಗರದಲ್ಲಿ ಕಳೆದ 24 ಗಂಟೆಗಳಲ್ಲಿ 320 ಮಿಲಿ ಮೀಟರ್ ಮಳೆಯಾಗಿದೆ. ಇದು ಹೊಸನಗರ ಇತಿಹಾಸದಲ್ಲಿಯೇ ಸುರಿದ ಅತಿ ಹೆಚ್ಚು ಮಳೆ ಎಂದು ದಾಖಲಾಗಿದೆ.
ಹೊಸನಗರದಲ್ಲಿ ಜೂನ್ ತಿಂಗಳ ವಾಡಿಕೆ ಮಳೆ 680 ಮಿ.ಮೀ ಆಗಬೇಕಿತ್ತು. ನಿನ್ನೆ ಒಂದೇ ದಿನಕ್ಕೆ 320 ಮಿ. ಮೀ. ಅಂದರೆ ಇದುವರೆಗೂ ಹೊಸನಗರದಲ್ಲಿ 1036.70 ಮೀ.ಮೀ ಮಳೆಯಾಗಿದೆ. ಕಳೆದ ವರ್ಷ ಹೊಸನಗರದಲ್ಲಿ 552.60 ಮಳೆಯಾಗಿತ್ತು. ಮಳೆ ಹೆಚ್ಚಾಗಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಇಂದು 31.676 ಕ್ಯೂಸೆಕ್ ನೀರು ಒಳ ಹರಿವು ಬಂದಿದೆ. ಶರಾವತಿ ಹಿನ್ನೀರಿನ ಪ್ರದೇಶದಲ್ಲಿ 172. ಮೀ.ಮೀಟರ್ ಮಳೆಯಾಗಿದೆ. ಹೊಸನಗರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದಲ್ಲಿ ಶರಾವತಿ ಹಾಲ್ನೂರೆಯಂತೆ ಧುಮ್ಮುಕ್ಕಿ ಹರಿಯುತ್ತಿದ್ದಾಳೆ.
ಕಳೆದ 24 ಗಂಟೆಯಲ್ಲಿ ತಾಲೂಕುವಾರು ಮಳೆ ವರದಿ ಇಂತಿದೆ:
- ಶಿವಮೊಗ್ಗ-16.40 ಮಿ.ಮೀ.
- ಭದ್ರಾವತಿ-9.20 ಮಿ.ಮೀ.
- ತೀರ್ಥಹಳ್ಳಿ-77.20 ಮಿ.ಮೀ.
- ಸಾಗರ-56.60 ಮಿ.ಮೀ.
- ಶಿಕಾರಿಪುರ- 15.20 ಮಿ.ಮೀ.
- ಸೊರಬ-48.20 ಮಿ.ಮೀ.
- ಹೊಸನಗರ-320 ಮಿ.ಮೀ.
- ಜಲಾಶಯಗಳ ನೀರಿನ ಮಟ್ಟ:
-
ತುಂಗಾ ಜಲಾಶಯ- ಗರಿಷ್ಠ ಮಟ್ಟ- 588.24 ಮೀಟರ್ ಇಂದಿನ ನೀರಿನ ಮಟ್ಟ- 588.24 ಮೀಟರ್, ಒಳ ಹರಿವು- 33.700 ಕ್ಯೂಸೆಕ್. ಹೊರ ಹರಿವು-33.700 ಕ್ಯೂಸೆಕ್. ಕಳೆದ ವರ್ಷ-588.24 ಮೀಟರ್.