ಕರ್ನಾಟಕ

karnataka

ETV Bharat / state

ಪತ್ರಕರ್ತರ ಸ್ಥಿತಿ ಸಂದಿಗ್ಧವಾಗಿದೆ: ರವೀಂದ್ರ ಭಟ್ ಅನಕೈ ವಿಷಾದ - ಜಿಲ್ಲಾಧಿಕಾರಿ ಕೆ ಎ ದಯಾನಂದ

ಪತ್ರಕರ್ತರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ತಮ್ಮದಲ್ಲದ ಕಾರಣಕ್ಕೆ ಇಂದು ಟೀಕೆಗೆ ಒಳಗಾಗುತ್ತಿದ್ದಾರೆ ಎಂದು ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅನಕೈ, ಶಿವಮೊಗ್ಗದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಷಾದ ವ್ಯಕ್ತ ಪಡಿಸಿದ್ದಾರೆ.

ಪತ್ರಿಕಾ ದಿನಾಚರಣೆಯಲ್ಲಿ ರವೀಂದ್ರ ಭಟ್ ಅನಕೈ ವಿಷಾದ ವ್ಯಕ್ತಪಡಿಸಿದರು

By

Published : Jul 31, 2019, 2:22 PM IST

ಶಿವಮೊಗ್ಗ;ಪತ್ರಕರ್ತರು ತಮ್ಮದಲ್ಲದ ಕಾರಣಕ್ಕಾಗಿ ಟೀಕೆಗೆ ಒಳಗಾಗುತ್ತಿದ್ದಾರೆ ಎಂದು ಪ್ರಜಾವಾಣಿಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅನಕೈ ವಿಷಾದ ವ್ಯಕ್ತಪಡಿಸಿದರು.

ಪತ್ರಿಕಾ ದಿನಾಚರಣೆಯಲ್ಲಿ ರವೀಂದ್ರ ಭಟ್ ಅನಕೈ ವಿಷಾದ ವ್ಯಕ್ತಪಡಿಸಿದರು

ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಸುಳ್ಳು ಗಳ ನಡುವೆ ಸತ್ಯ ಹೇಳುವುದು ತುಂಬಾ ಕಷ್ಟವಾಗುತ್ತದೆ. ಪತ್ರಕರ್ತರು ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ರಾಜಕಾರಣ ಬಿಟ್ಟರೆ ಅತಿ ಹೆಚ್ಚು ಟೀಕೆಗೆ ಒಳಗಾಗುತ್ತಿರುವುದು ಮಾಧ್ಯಮ ಕ್ಷೇತ್ರ, ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮ ತುಂಬಾ ಇಂತಹ ಟೀಕೆಗಳಿಗೆ ಒಳಗಾಗುತ್ತಿದೆ ಎಂದರು.

ನಂತರದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ. ಎ. ದಯಾನಂದ ಮಾಧ್ಯಮ ಇಂದು ವಿಮರ್ಶೆಗೆ ಒಳಗಾಗಿದೆ. ಅಭಿವ್ಯಕ್ತಿ ಸ್ವಾತಂತ್ರ ಎಷ್ಟಿದ್ದರೂ ಬದಲಾವಣೆಗಳು ಹೇಗೆ ಆದರೂ ಕೂಡಾ ವರ್ತಮಾನದ ಸನ್ನಿವೇಶದಲ್ಲಿ ಪತ್ರಿಕೆ ಮತ್ತು ಸಮಾಜದ ನಡುವೆ ಸಂಘರ್ಷ ಇದೆ. ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಸ್ಥಿತಿಯನ್ನು ನಾವು ತಲುಪಿದ್ದೇವೆ. ಇದಕ್ಕೆ ಬಹುಮುಖ್ಯ ಕಾರಣ ಪತ್ರಕರ್ತರ ಅವಸರದ ಓಟ, ಅದರಲ್ಲೂ ದೃಶ್ಯ ಮಾದ್ಯಮಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ ಎಂದರು. ಏನೇ ಆದರೂ ಪತ್ರಿಕೋದ್ಯಮ ಒಂದು ಪ್ರಭಾವಿ ಮಾಧ್ಯಮ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಅದರ ಪಾತ್ರ ಹಿರಿದಾಗಿದೆ ಎಂದರು.

ABOUT THE AUTHOR

...view details