ಕರ್ನಾಟಕ

karnataka

ETV Bharat / state

ಅಕ್ರಮ ಪಡಿತರ ಸಂಗ್ರಹ: ಸಾಗಿಸುವಾಗ ಸಿಕ್ಕಿಬಿದ್ದ ಕಳ್ಳರು, 168 ಕ್ವಿಂಟಲ್ ಅಕ್ಕಿ ವಶ - ಪಡಿತರ ಅಕ್ಕಿ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ
ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ

By

Published : Nov 22, 2022, 8:29 AM IST

Updated : Nov 22, 2022, 10:53 AM IST

ಶಿವಮೊಗ್ಗ: ಕಾಳ ಸಂತೆಯಲ್ಲಿ ಮಾರಾಟ ಮಾಡಲು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹ ಮಾಡಿದ್ದ ಗೋದಾಮು ಮೇಲೆ ಪೊಲೀಸರು ಹಾಗೂ ನಾಗರಿಕ ಆಹಾರ ಪೂರೈಕೆ ಇಲಾಖೆ ಜಂಟಿಯಾಗಿ ದಾಳಿ ನಡೆಸಿ 6 ಜನರನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿದೆ.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾ ನಗರ ಪೊಲೀಸರು, ಗಾಡಿಕೊಪ್ಪದ ಗೋದಾಮಿನಲ್ಲಿದ್ದ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುವಾಗ ದಾಳಿ ನಡೆಸಿದ್ದಾರೆ. ಈ ವೇಳೆ ಕಾರ್ತೀಕೇಯನ್ ಅಲಿಯಾಸ್ ಕಾರ್ತಿಕ್ (53), ಗೋಪಿ (23), ಸೀತಾರಾಮ (40), ಕಾಂತರಾಜ (32), ಯುವರಾಜ (28), ಶ್ರೀನಿಧಿ (20) ಎಂಬುವರನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ 3.70 ಲಕ್ಷ ರೂ ಮೌಲ್ಯದ ಒಟ್ಟು 338 ಚೀಲಗಳಲ್ಲಿ ತುಂಬಿದ್ದ 168 ಕ್ವಿಂಟಲ್ ತೂಕದ ಅಕ್ಕಿ, ಎರಡು ಕ್ಯಾಂಟರ್ ವಾಹನ, 2 ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಒಂದು ಚೀಲ ಹೊಲಿಗೆ ಯಂತ್ರವನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಪಡಿತರ ಅಕ್ಕಿ ಮಾರಾಟ, ಬೋಗಸ್ ರೇಷನ್‌ ಕಾರ್ಡ್ ರದ್ಧತಿಗೆ ಆಗ್ರಹಿಸಿ ಅರೆಬೆತ್ತಲೆ ಹೋರಾಟ

Last Updated : Nov 22, 2022, 10:53 AM IST

ABOUT THE AUTHOR

...view details