ಶಿವಮೊಗ್ಗ:ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಯುವಕ ದೂರು ವಾಪಸ್ ಪಡೆಯುವಂತೆ ಧಮ್ಕಿ ಹಾಕುತ್ತಿರುವ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಅಪ್ರಾಪ್ತೆ ಮೇಲೆ ಅದೇ ಗ್ರಾಮದ ಯುವಕ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ದಾಖಲಾಗಿತ್ತು.
ಅತ್ಯಾಚಾರ ನಡೆದ ಬಳಿಕ ಯುವಕ ಈ ವಿಚಾರವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಸಿದ್ದಾನೆ. ಆದರೆ ಅಪ್ರಾಪ್ತೆಯು ತನ್ನ ಅಜ್ಜಿಯ ಬಳಿ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಈ ಕುರಿತು ಆಕೆಯ ಪೋಷಕರು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ ಬಾಲಕಿ ಮಹಿಳಾ ಮತ್ತು ಮಕ್ಕಳ ಘಟಕದಲ್ಲಿ 10 ದಿನಗಳ ಕಾಲ ರಕ್ಷಣೆಯಲ್ಲಿದ್ದಳು. ಬಳಿಕ ಬಾಲಕಿಯನ್ನು ಪೋಷಕರು ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು.