ಶಿವಮೊಗ್ಗ:ಅತ್ಯಾಚಾರ ಪ್ರಕರಣದ ಆರೋಪಿ ಸುರೇಶ ಎಂಬಾತ ವೈದ್ಯಕೀಯ ತಪಾಸಣೆ ವೇಳೆ ಪರಾರಿಯಾಗಿದ್ದ. ಹೀಗಾಗಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಅಮಾನತಿಗೆ ಕಾರಣನಾದ ಆರೋಪಿ ಅರೆಸ್ಟ್ - ಅತ್ಯಾಚಾರ ಆರೋಪಿ ಬಂಧನ
ಅತ್ಯಾಚಾರ ಪ್ರಕರಣದ ಆರೋಪಿ ವೈದ್ಯಕೀಯ ತಪಾಸಣೆ ವೇಳೆ ಪರಾರಿಯಾಗಿದ್ದು ಕರ್ತವ್ಯ ಲೋಪ ಹಿನ್ನೆಲೆ ಮಾಳೂರು ಪೊಲೀಸ್ ಠಾಣೆ ಪಿಎಸ್ಐ ಅಶ್ವಿನ್ ಕುಮಾರ್ ಹಾಗೂ ಹೆಡ್ಕಾನ್ಸ್ಟೇಬಲ್ ಪ್ರಸನ್ನ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
ಆರೋಪಿ ಸುರೇಶ
ಪರಾರಿಯಾಗಿದ್ದ ಸುರೇಶ್ನನ್ನು ಪೊಲೀಸರು ಕೇರಳದ ಕಾಸರಗೋಡಿನ ಅಣಗೂರಿನಲ್ಲಿ ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.