ಶಿವಮೊಗ್ಗ: ಕಾಡಾನೆ ದಾಳಿಗೆ ಸಕ್ರೆಬೈಲಿನ ಸಾಕಾನೆ ರಂಗ(35) ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ ಸಕ್ರೆಬೈಲಿನ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಟ್ಟಾಗ ಕಾಡಾನೆ ದಾಳಿ ನಡೆಸಿದೆ.
ಪ್ರತಿದಿನ ಆನೆಗಳನ್ನು ಕ್ಯಾಂಪ್ನಿಂದ ಕಾಡಿಗೆ ಮೇಯಲು ಬಿಡಲಾಗುತ್ತದೆ. ಬೆಳಗ್ಗೆ ಆನೆಯನ್ನು ಹಿಡಿಯಲು ಹಾಗೂ ಆನೆಯ ಗುರುತು ಪತ್ತೆಗಾಗಿ ಸರಪಳಿಯನ್ನು ಹಾಕಲಾಗುತ್ತದೆ. ಇದೇ ರಂಗನ ಸಾವಿಗ ಕಾರಣವಾಗಿದೆ ಎನ್ನಲಾಗಿದೆ.
ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೆ ರಂಗ ಸಾವನ್ನಪ್ಪಿದೆ. ಇಂದು ಬೆಳಗ್ಗೆ ಆನೆಯನ್ನು ಮಾವುತ ಕ್ಯಾಂಪ್ಗೆ ಕರೆತರಲು ಹೋದಾಗ ಆನೆ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ರಂಗನ ಮೇಲೆ ಕಾಡಾನೆಗಳು ತೀವ್ರವಾಗಿ ದಾಳಿ ನಡೆಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ರಂಗ ಕ್ಯಾಂಪ್ನ ಗೀತಾ ಎಂಬ ಆನೆಯ ಮರಿಯಾಗಿತ್ತು. ಕಳೆದ ಒಂದು ತಿಂಗಳಲ್ಲಿ ಮೂರು ಆನೆಗಳು ಸಾವನ್ನಪ್ಪಿವೆ. ಕಾಡಿನಿಂದ ತಂದಿದ್ದ ಮರಿಯಾನೆ, ಸಕಲೇಶಪುರದಲ್ಲಿ ಸೆರೆ ಹಿಡಿದಿದ್ದ ಏಕದಂತ ಹಾಗೂ ಈಗ ರಂಗ ಸಾವನ್ನಪ್ಪಿದ್ದಾನೆ.