ತುಮಕೂರು: ಲಾಕ್ಡೌನ್ ಹಿನ್ನೆಲೆ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಗೆ ಮುಸ್ಲಿಂ ಬಾಂಧವರು ಕಡಿವಾಣ ಹಾಕಿ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಿದ್ದಾರೆ.
ತಮ್ಮ ಮನೆಗಳ ಆವರಣದಲ್ಲಿಯೇ ಸಾಮೂಹಿಕ ಪ್ರಾರ್ಥನೆಯನ್ನು ಸಾಮಾಜಿಕ ಅಂತರ ಕಾಪಾಡುವ ಮೂಲಕ ನೆರವೇರಿಸಿದ ಅವರು, ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಈ ಬಾರಿ ಅತಿ ಸರಳವಾಗಿ ಆಚರಣೆಯಲ್ಲಿ ತೊಡಗಿದ್ದಾರೆ.
ತುಮಕೂರಿನಲ್ಲಿ ಸರಳವಾಗಿ ರಂಜಾನ್ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು ಶಿವಮೊಗ್ಗದಲ್ಲೂ ನಿಯಮ ಪಾಲಿಸಿದ ಮುಸ್ಲಿಂ ಬಾಂಧವರು
ಕೋವಿಡ್ ಹಿನ್ನೆಲೆ ಸರ್ಕಾರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ನಿಷೇಧ ಮಾಡಿದ ಕಾರಣದಿಂದಾಗಿ ನಗರದ ಮುಸ್ಲಿಂಮರು ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲಿಯೇ ನಮಾಜ್ ಮಾಡಿ ಅಲ್ಲಾಹುವಿನಲ್ಲಿ ಪ್ರಾರ್ಥನೆ ಮಾಡಿದ್ದಾರೆ. ವಿಶ್ವಕ್ಕೆ ಅಂಟಿರುವ ಕೋವಿಡ್ ರೋಗವನ್ನು ತಡೆದು ಆರೋಗ್ಯ ಕರುಣಿಸುವಂತೆ ಪ್ರಾರ್ಥನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸರಳವಾಗಿ ರಂಜಾನ್ ಹಬ್ಬವನ್ನು ಆಚರಿಸಿದ ಮುಸ್ಮಿಂ ಬಾಂಧವರು ಒಂದು ತಿಂಗಳು ಉಪವಾಸ ನಡೆಸಿ, ಪವಿತ್ರ ರಂಜಾನ್ ಆಚರಣೆ ನಡೆಸುವುದು ಮುಸ್ಲಿಮರ ಸಂಪ್ರದಾಯವಾಗಿದೆ. ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತದ ನಂತರ ಆಹಾರ ಸೇವಿಸುವುದು ರಂಜಾನ್ನ ವಿಶೇಷತೆಯಾಗಿದೆ. ಕಠಿಣ ಒಂದು ತಿಂಗಳ ಉಪವಾಸದ ನಂತರ ಹಬ್ಬದ ಆಚರಣೆಗೆ ಕೋವಿಡ್ ಅಡ್ಡಿಯಾಗಿದ್ದರೂ ಮುಸ್ಲಿಂ ಭಾಂದವರು ಮನೆಯಲ್ಲಿಯೇ ನಮಾಜ್ ನಡೆಸಿ, ಕುಟುಂಬಸ್ಥರೊಂದಿಗೆ ಹಬ್ಬವನ್ನು ಆಚರಿಸಿದ್ದಾರೆ.
ಓದಿ:"ಅತಿ ಹೆಚ್ಚು ಜನರ ಸಾವಿಗೆ ಲಸಿಕೆ ಬಗ್ಗೆ ದಾರಿ ತಪ್ಪಿಸಿದ ಪಕ್ಷಗಳೇ ಕಾರಣ"