ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​​​​​​ಗಳಿಗೆ ರಕ್ಷಣಾ ಫೌಂಡೇಶನ್​​​ನಿಂದ ಸನ್ಮಾನ - ಶಿವಮೊಗ್ಗ ರಕ್ಷಣಾ ಫೌಂಡೇಶನ್ ನಿಂದ ಸನ್ಮಾನ ಸುದ್ದಿ

’’ ನಮ್ಮನ್ನು ಗುರುತಿಸಿ ಸನ್ಮಾನ‌ ಮಾಡಿದ್ದು, ನಮಗೆಲ್ಲ ತುಂಬಾ‌ ಸಂತೋಷವಾಗಿದೆ. ಇದರಿಂದ ನಮಗೆ ಇನ್ನಷ್ಟು ಹುಮ್ಮಸ್ಸು ಬಂದಂತೆ ಆಗಿದೆ ಎಂದು ಡಾ.ರುದ್ರೇಶ್ ಸಂತಸ ವ್ಯಕ್ತಪಡಿಸಿದರು. ರಕ್ಷಣಾ ಫೌಂಡೇಶನ್ ವತಿಯಿಂದ ಕೊರೊನಾ ವಾರಿಯರ್ಸ್​ಗಳಿಗೆ ಸನ್ಮಾನ ಮಾಡಲಾಯಿತು.

ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ
ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ

By

Published : Jun 9, 2020, 9:34 AM IST

ಶಿವಮೊಗ್ಗ:ಕೊರೊನಾ ಮಹಾಮಾರಿಯ ವಿರುದ್ದ ಹೋರಾಟದಲ್ಲಿ ಅಗ್ರಗಣ್ಯರಾದ‌ ಕೊರೊನಾ ವಾರಿಯರ್ಸ್​​​​ಗಳಿಗೆ ರಕ್ಷಣಾ ಫೌಂಡೇಶನ್ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

ನಗರದ ಪ್ರೆಸ್ ಟ್ರಸ್ಟ್ ನಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯವರನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಆರೋಗ್ಯ ಇಲಾಖೆಯ ಡಾ. ಇರ್ಫಾನ್, ಹೆಲ್ತ್ ಇನ್ಸ್ ಪೆಕ್ಟರ್ ಗಳಾದ ಡಾ. ಮಧು ಕುಮಾರ್, ರಾಕೇಶ್, ಡಾ.ಗಿರೀಶ್, ಶೇರ್ ಅಲಿ ಖಾನ್ , ಸ್ವ್ಯಾಬ್ ಟೆಸ್ಟ್ ಕೋ ಆರ್ಡಿನೇಟರ್ ಡಾ. ರುದ್ರೇಶ್ ಹಾಗೂ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರತಿಮಾ ಡಾಕಪ್ಪ ನವರಿಗೆ ಸನ್ಮಾನ ಮಾಡಲಾಯಿತು.

ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ

ಸನ್ಮಾನಿತರಿಗೆ ಹಾರ, ಶಾಲು ಹಾಗೂ ಫಲ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಸುರೇಖಾ ಮುರುಳೀಧರ್ ಭಾಗಿಯಾಗಿ ಕೊರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಮಾಡಿದರು.

ರಕ್ಷಣಾ ಫೌಂಡೇಶನ್​​​​​ನಿಂದ ನಡೆದ ಸನ್ಮಾನ‌ ಸ್ವೀಕರಿಸಿ ಮಾತನಾಡಿದ ಡಾ.ರುದ್ರೇಶ್ ಅವರು ನಮ್ಮನ್ನು ಗುರುತಿಸಿ ಸನ್ಮಾನ‌ ಮಾಡಿದ್ದು, ನಮಗೆಲ್ಲ ತುಂಬಾ ಸಂತಷವಾಗಿದೆ. ಇದರಿಂದ ನಮಗೆ ಇನ್ನಷ್ಟು ಹುಮ್ಮಸ್ಸು ಬಂದಂತೆ ಆಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ರಕ್ಷಣಾ ಫೌಂಡೇಶನ್​​​​​ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ವಾಣಿ ಗೌಡ ಅವರು, ಕೊರೊನಾ ಅಂದ್ರೆ ಭಯಪಡುವ ವಾತಾವರಣದಲ್ಲಿ ಕೊರೊನಾ ಪಾಸಿಟಿವ್ ಬಂದವರಿಗೆ ಆರೈಕೆ ಮಾಡುತ್ತಾ, ಅವರನ್ನು ಗುಣ ಪಡಿಸಿ ಮನೆಗೆ ಕಳುಹಿಸುವಂತಹ ಕಾರ್ಯ ಮಾಡುವ ಇವರಿಗೆ ನಮ್ಮದೊಂದು ಅಳಿಲು ಸೇವೆ ಎಂದು ತಿಳಿಸಿದರು.

ABOUT THE AUTHOR

...view details