ಶಿವಮೊಗ್ಗ:ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮಳೆ ಪ್ರಾರಂಭವಾಗಿದೆ. ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತದೆ. ವರುಣನ ಆಗಮನದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 199.90 ಮಿಮೀ ಮಳೆ ಸುರಿದಿದೆ. ಸರಾಸರಿ 28.56 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 687.87 ಮಿಮೀ ಇದ್ದು, ಈವರೆಗೆ ಸರಾಸರಿ 73.13 ಮಿಮೀ ಮಳೆ ಮಾತ್ರ ದಾಖಲಾಗಿದೆ.
ಶಿವಮೊಗ್ಗ 10.50 ಮಿಮೀ, ಭದ್ರಾವತಿ 8.50 ಮಿಮೀ, ತೀರ್ಥಹಳ್ಳಿ 44.80 ಮಿಮೀ, ಸಾಗರ 57.10 ಮಿಮೀ, ಶಿಕಾರಿಪುರ 10.60 ಮಿಮೀ, ಸೊರಬ 15.20 ಮಿಮೀ ಹಾಗೂ ಹೊಸನಗರ 53.20 ಮಿಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ: ಲಿಂಗನಮಕ್ಕಿ:-1819 ಕ್ಯೂಸೆಕ್ (ಗರಿಷ್ಠ), ಇಂದಿನ ನೀರಿನ ಮಟ್ಟ- 1742.70 ಕ್ಯೂಸೆಕ್, ಒಳ ಹರಿವು- 9237.00, ಹೊರ ಹರಿವು( ವಿದ್ಯುತ್)-1677.00 ಕ್ಯೂಸೆಕ್ ಕಳೆದ ವರ್ಷ ನೀರಿನ ಮಟ್ಟ 1762.10 ಕ್ಯೂಸೆಕ್.
ಭದ್ರಾ:(ಕ್ಯೂಸೆಕ್ಗಳಲ್ಲಿ)186 (ಗರಿಷ್ಠ), ಇಂದಿನ ನೀರಿನ ಮಟ್ಟ- 137.20, ಒಳ ಹರಿವು- 2397.00, ಹೊರ ಹರಿವು- 209.00, ಕಳೆದ ವರ್ಷ ನೀರಿನ ಮಟ್ಟ 158.20.
ತುಂಗಾ:(ಕ್ಯೂಸೆಕ್ಗಳಲ್ಲಿ)588.24 (ಗರಿಷ್ಠ), ಇಂದಿನ ನೀರಿನ ಮಟ್ಟ- 587.54, ಒಳ ಹರಿವು- 4830.00, ಹೊರ ಹರಿವು- 50.00. ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ:595 (ಎಂಎಸ್‍ಎಲ್‍ಗಳಲ್ಲಿ), ಇಂದಿನ ನೀರಿನ ಮಟ್ಟ- 570.96, ಒಳಹರಿವು- 2195 (ಕ್ಯೂಸೆಕ್) ಕಳೆದ ವರ್ಷ ನೀರಿನ ಮಟ್ಟ 572.98