ಶಿವಮೊಗ್ಗ:ರಾಜ್ಯಾದಾದ್ಯಂತ ವರುಣನ ಪ್ರತಾಪ ಜೋರಾಗಿದ್ದು, ಮಲೆನಾಡಿನಲ್ಲಿ ಮಳೆಯ ಅರ್ಭಟ ಮುಂದುವರೆದಿದೆ.
ಮಲೆನಾಡಲ್ಲಿ ಮಳೆ ಆರ್ಭಟ: ಹೊಸನಗರ-ಕೊಲ್ಲೂರು ರಸ್ತೆ ಸಂಪರ್ಕ ಕಡಿತ - ಹೊಸನಗರ,ಕೊಲ್ಲೂರು
ರಾಜ್ಯಾದಾದ್ಯಂತ ವರುಣನ ಪ್ರತಾಪ ಜೋರಾಗಿದ್ದು, ಮಲೆನಾಡಿನಲ್ಲಿ ಮಳೆಯ ಅರ್ಭಟ ಮುಂದುವರೆದಿದೆ. ಮಳೆಗೆ ಹೊಸನಗರದ ಕಾರಣಗಿರಿಯಲ್ಲಿ ರಸ್ತೆ ಕುಸಿದಿದ್ದು, ಪರಿಣಾಮ ಹೊಸನಗರ-ಕೊಲ್ಲುರು-ಉಡುಪಿ ರಸ್ತೆ ಬಂದ್ ಆಗಿದೆ.
Shimoga district,ಶಿವಮೊಗ್ಗ ಜಿಲ್ಲೆ
ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು, ಹೊಸನಗರ, ಸಾಗರ, ಸೊರಬ, ಶಿವಮೊಗ್ಗ ತಾಲೂಕಿನ ಹಲವು ಗದ್ದೆಗಳು ಸಂಪೂರ್ಣ ಜಲಾವೃತವಾಗಿವೆ. ಇನ್ನು ಮಳೆಗೆ ಹೊಸನಗರದ ಕಾರಣಗಿರಿಯಲ್ಲಿ ರಸ್ತೆ ಕುಸಿದಿದ್ದು, ಪರಿಣಾಮ ಹೊಸನಗರ- ಕೊಲ್ಲುರು -ಉಡುಪಿ ರಸ್ತೆ ಬಂದ್ ಆಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿತವಾದ ಕಾರಣ ಬಸ್ ಸಿಕ್ಕಿಹಾಕಿಕೊಂಡಿದೆ. ಇನ್ನು ರಸ್ತೆಯಿಂದ ಪಕ್ಕದಲ್ಲಿ ಇಳಿದ ಲಾರಿ ಪಲ್ಟಿಯಾಗಿದೆ. ಅಲ್ಲದೆ ನಗರದ ಕಂಟ್ರಿ ಕ್ಲಬ್ ಬಳಿ ಅನೇಕ ಲೇಔಟ್ಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.