ಕರ್ನಾಟಕ

karnataka

ETV Bharat / state

ಲಾಕ್​​​​​ಡೌನ್ ಸದುಪಯೋಗ: 7 ದಿನದಲ್ಲಿ ತುಂಗಾ ನದಿ ರೈಲ್ವೆ ಬ್ರಿಡ್ಜ್ ಮರು ಹೊಂದಾಣಿಕೆ - lock down

ಲಾಕ್ ಡೌನ್​ನಲ್ಲಿ ಯಾವುದೇ ರೈಲು ಸಂಚಾರ ಇರದೇ ಇರುವುದನ್ನು ಸದುಪಯೋಗಪಡಿಸಿಕೊಂಡ ರೈಲ್ವೆ ಇಲಾಖೆಯು ತುಂಗಾ ನದಿಯ ರೈಲ್ವೆ ಸೇತುವೆಯ ಮರು ಹೊಂದಾಣಿಕೆ ಕಾಮಗಾರಿ ನಡೆಸಿದೆ.

repair work
repair work

By

Published : May 9, 2020, 2:54 PM IST

ಶಿವಮೊಗ್ಗ: ತುಂಗಾ ನದಿಯ ರೈಲ್ವೆ ಸೇತುವೆಯ ಮರುಹೊಂದಾಣಿಕೆ ಕೇವಲ ಏಳು ದಿನಗಳಲ್ಲಿ ಮಾಡಿ ರೈಲ್ವೆ ಇಲಾಖೆ ದಾಖಲೆ ಬರೆದಿದೆ. ಶಿವಮೊಗ್ಗ ಸಿಟಿಯಿಂದ ಭದ್ರಾವತಿ ಕಡೆ ಸಾಗುವ ರೈಲ್ವೆ ಬ್ರಿಡ್ಜ್ ಇದಾಗಿದೆ.

ಲಾಕ್​​​ಡೌನ್​​​​​​ನಲ್ಲಿ ಯಾವುದೇ ರೈಲು ಸಂಚಾರ ಇರದೇ ಇರುವುದನ್ನು ಸದುಪಯೋಗಪಡಿಸಿಕೊಂಡ ರೈಲ್ವೆ ಇಲಾಖೆಯು 120 ಜನರನ್ನು ಬಳಸಿಕೊಂಡು ಕ್ರೇನ್ ಹಾಗೂ ಜೆಸಿಬಿ ಮೂಲಕ ಕಾಮಗಾರಿ ಮುಗಿಸಿದೆ.

ರೈಲ್ವೆ ಬ್ರಿಡ್ಜ್ ಮರುಹೊಂದಾಣಿಕೆ

ನೆಲ ಮಟ್ಟದಿಂದ 43 ಅಡಿ ಎತ್ತರದ ರೈಲ್ವೆ ಬ್ರಿಡ್ಜ್ ಅನ್ನು ಮರು ಹೊಂದಾಣಿಕೆ ಮಾಡಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸೇತುವೆಯು 25 ಟನ್ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದೆ.

ರೈಲ್ವೆ ಬ್ರಿಡ್ಜ್ ಮರುಹೊಂದಾಣಿಕೆ

ಶಿವಮೊಗ್ಗದ ತುಂಗಾ ನದಿ ರೈಲ್ವೆ ಸೇತುವೆ ಹಾಗೂ ಭದ್ರಾವತಿಯ ಭದ್ರಾ ನದಿ‌ ಸೇತುವೆ ಕಾಮಗಾರಿ 2018ರಲ್ಲಿ ಪ್ರಾರಂಭವಾಗಿ 2020ರಲ್ಲಿ ಮುಕ್ತಾಯವಾಗಿದೆ.

ರೈಲ್ವೆ ಬ್ರಿಡ್ಜ್ ಮರುಹೊಂದಾಣಿಕೆ

1800ರಲ್ಲಿ ಈ ಸೇತುವೆ ನಿರ್ಮಾಣವಾಗಿದೆ. ಮೊದಲು ಮೀಟರ್ ಗೇಜ್​ಗಾಗಿ ನಿರ್ಮಾಣ ಮಾಡಲಾಗಿತ್ತು. 1994ರಲ್ಲಿ ಬ್ರಾಡ್ ಗೇಜ್ ಆಗಿ ಮಾರ್ಪಡು ಮಾಡಲಾಗಿದೆ. ಅಲ್ಲಿಂದ ಇಲ್ಲಿಯವರೆಗೂ ದೊಡ್ಡ ಮಟ್ಟದ ರಿಪೇರಿ ನಡೆದಿರಲಿಲ್ಲ ಎಂದು ರೈಲ್ವೆ ಇಲಾಖೆಯ ಮೈಸೂರು ವಿಭಾಗ ತಿಳಿಸಿದೆ.

ABOUT THE AUTHOR

...view details