ಶಿವಮೊಗ್ಗ:ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನ್ಮ ದಿನದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಸಂಘಟನೆ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಣೆ ಮಾಡಿದರು.
ರಾಗ ಜನ್ಮದಿನ ಅಂಗವಾಗಿ ಎನ್ಎಸ್ಯುಐ ನಿಂದ ಹಣ್ಣು ವಿತರಣೆ - Shimoga latest news
ರಾಹುಲ್ ಗಾಂಧಿ ಜನ್ಮ ದಿನದ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಎನ್ಎಸ್ಯುಐ ಸಂಘಟನೆ ಮೆಗ್ಗಾನ್ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿದರು.
Rahul gandhi birthday celebration
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಿಭಾಗದ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಣೆ ಮಾಡಿದರು. ಪ್ರತಿ ವಾರ್ಡ್ಗಳಿಗೆ ಹೋಗಿ ಹಣ್ಣು, ಬ್ರೆಡ್ ವಿತರಿಸಿದರು.
ಈ ವೇಳೆ ರಾಜ್ಯ ಎನ್ಎಸ್ಯುಐನ ಚೇತನ್, ಜಿಲ್ಲಾ ಎನ್ಎಸ್ಯುಐನ ಜಿಲ್ಲಾಧ್ಯಕ್ಷ ಬಾಲಾಜಿ, ಯುವ ಕಾಂಗ್ರೆಸ್ನ ಮಧು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.