ಶಿವಮೊಗ್ಗ: ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನಿಗೆ 2 ವರ್ಷ ಕಠಿಣ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ-1 ಆದೇಶ ನೀಡಿದೆ.
2020 ರ ಮೇ 6 ರಂದು ಸಿಐಡಿ ಪೊಲೀಸರು ಒಂದು ಪ್ರಕರಣ ದಾಖಲಿಸಿರುತ್ತಾರೆ. ಶಿವಮೊಗ್ಗದ ದುಮ್ಮಳ್ಳಿಯ ನಿವಾಸಿ ರಘು(25) ಎಂಬುವವರು ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು.
ತನಿಖಾಧಿಕಾರಿಯಾದ ಸಿಇಎನ್ ಪೊಲೀಸ್ ಠಾಣೆಯ ಪಿಐ ಗುರುರಾಜ್ ತನಿಖೆ ನಡೆಸಿ ಕಲಂ 12 ಪೊಕ್ಸೊ ಮತ್ತು 354(A) IPC ದೂರು ದಾಖಲಿಸಿದ್ದರು. 24-05-2020 ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದಾರೆ. ಮಾನ್ಯ ನ್ಯಾಯಾಧೀಶರಾದ ದಯಾನಂದ ವಿ.ಹೆಚ್.ರವರು ಇಂದು ರಘುವಿಗೆ ಎರಡು ವರ್ಷ ಕಠಿಣ ಕಾರಗೃಹ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿದ್ದಾರೆ. ದಂಡವನ್ನು ಕಟ್ಟಲು ವಿಫಲನಾದರೆ, 6 ತಿಂಗಳು ಕಾಲ ಸಾದಾ ಕಾರಗೃಹವನ್ನು ವಿಧಿಸಿದ್ದಾರೆ.
ಇದನ್ನೂ ಓದಿ:ವಾಸೀಂ ಪಠಾಣ್ ಪರ ವಕಾಲತ್ತು ವಹಿಸದೇ ಇರುವುದು ಸ್ವಾಗತಾರ್ಹ: ಹಿರಿಯ ವಕೀಲ ಅಣ್ವೇಕರ್