ಕರ್ನಾಟಕ

karnataka

ETV Bharat / state

ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ ಪ್ರೀ-ಪೇಡ್​​​​ ಆಟೋ ಸ್ಟ್ಯಾಂಡ್​​​​: ಆರಂಭಿಸುವಂತೆ ಪ್ರಯಾಣಿಕರ ಒತ್ತಾಯ

ನಗರದ ಮುಖ್ಯ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ರೀ-ಪೇಡ್ ಆಟೋ ಸ್ಟ್ಯಾಂಡ್​ ನಿರ್ಮಾಣ ಮಾಡುವಂತೆ ಸ್ಥಳೀಯ ಪ್ರಯಾಣಿಕರು ಒತ್ತಾಯ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Mar 12, 2019, 6:04 PM IST

ಶಿವಮೊಗ್ಗ: ಈ ಹಿಂದೆ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪನವರು 8 ಲಕ್ಷ ರೂ. ಅನುದಾನ ನೀಡಿ ನಗರದ ಮುಖ್ಯ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಸುರಕ್ಷತೆಗಾಗಿ ಪ್ರೀ-ಪೇಡ್ ಆಟೋ ಸ್ಟ್ಯಾಂಡ್​ ನಿರ್ಮಾಣ ಮಾಡಿಸಿದ್ದರು. ಆದರೆ, ಈ ಸೌಲಭ್ಯ ಯಾರಿಗೂ ಲಭ್ಯವಾಗಿಲ್ಲ ಎನ್ನುತ್ತಾರೆ ಸ್ಥಳೀಯ ಪ್ರಯಾಣಿಕರು.

ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ ಹಾಗೂ ಹಣ ಉಳಿತಾಯ ಮಾಡುವ ಪ್ರೀ-ಪೇಡ್ ಆಟೋ ಸ್ಟ್ಯಾಂಡ್​ ಸೇವೆ ಈಗಾಗಲೇ ಬೇರೆ ಮಹಾನಗರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬೇರೆ ಜಿಲ್ಲೆಗಳಲ್ಲಿ ಇದ್ದ ಪ್ರೀ- ಪೇಡ್ ಆಟೋ ಸೆಂಟರ್ ಶಿವಮೊಗ್ಗದಲ್ಲಿ‌ ಪ್ರಾರಂಭವಾದಾಗ ಸಾರ್ವಜನಿಕರು ಸಹ ಸಂತಸಗೊಂಡಿದ್ದರು. ಅದರಲ್ಲೂ ಮಹಿಳಾ ಪ್ರಯಾಣಿಕರು ಇನ್ನೂ ಖುಷಿಪಟ್ಟಿದ್ದರು.

ಪ್ರೀ-ಪೇಡ್ ಆಟೋ ಸ್ಟ್ಯಾಂಡ್​ ನಿರ್ಮಾಣ ಮಾಡುವಂತೆ ಸ್ಥಳೀಯ ಪ್ರಯಾಣಿಕರು ಒತ್ತಾಯ

ಆದ್ರೆ ಇವರ ಸಂತಸ ಬಹಳ ದಿನ ಇರಲಿಲ್ಲ. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಪ್ರೀ-ಪೇಡ್ ಆಟೋ ಸ್ಟ್ಯಾಂಡ್ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗಳಿಸಿದೆ.

ಪ್ರೀ-ಪೇಡ್ ಆಟೋ‌‌‌ ಸ್ಟ್ಯಾಂಡ್ ಕಾರ್ಯ ನಿರ್ವಹಣೆ:

ಈ ಆಟೋ ಸೆಂಟರ್​ನಲ್ಲಿ ಮೊದಲು ಆಟೋ ಚಾಲಕರು ತಮ್ಮ ಆಟೋವನ್ನು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಅಲ್ಲಿ ತಮ್ಮ ಆಟೋದ ವಿವರ, ಚಾಲಕನ ವಿವರವನ್ನು ನೀಡಬೇಕು. ಅದರಂತೆ ಪ್ರಯಾಣಿಕರು ತಮ್ಮ ಪ್ರಯಾಣದ ಹಣವನ್ನು ಮೊದಲೆ ಸ್ಟ್ಯಾಂಡ್​ನಲ್ಲಿ ಸಲ್ಲಿಕೆ ಮಾಡಬೇಕು. ನಂತರ ಪ್ರಯಾಣಿಕರು ಬಂದು ತಾವು ಹೋಗುವ ಮಾರ್ಗದ ಕುರಿತು ಸ್ಟ್ಯಾಂಡ್​ನಲ್ಲಿ ತಿಳಿಸಿದರೆ ಸೀನಿಯಾರಿಟಿ ಮೇಲೆ ಆಟೋವನ್ನು ಕಳುಹಿಸಿ ಕೊಡಲಾಗುತ್ತದೆ. ಇಲ್ಲಿ ಆಟೋ ಮೀಟರ್​ನಲ್ಲಿ ಬರುವಷ್ಟು ಹಣವನ್ನು ಮಾತ್ರ ಪ್ರಯಾಣಿಕರು ನೀಡಬೇಕು. ಅದೇ ರೀತಿ ಅಷ್ಟೇ ಹಣವನ್ನು ಆಟೋ ಚಾಲಕ ಪಡೆದುಕೊಳ್ಳಬೇಕು.‌ ಆದರೆ, ಇದು ಆಟೋ ಚಾಲಕರಿಗೆ ನಷ್ಟವನ್ನುಂಟು ಮಾಡುತ್ತದೆ. ಹಾಗಾಗಿ ಇದಕ್ಕೆ ಸ್ಥಳೀಯ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪ್ರೀ-ಪೇಡ್ ಆಟೋ ಸೆಂಟರ್ ಚಾಲನೆ ಮಾಡುವಲ್ಲಿ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆಟೋ‌‌‌ ಸ್ಟ್ಯಾಂಡ್ ಕಾರ್ಯಾರಂಭ ಮಾಡಿದರೆ ಪ್ರಯಾಣಿಕರ ಸುಲಿಗೆ ನಿಲ್ಲುತ್ತದೆ. ಇನ್ನು ಆಟೋ ಚಾಲಕರಿಂದ ನಡೆಯಬಹುದಾದ ಕ್ರೈಂ ಸಹ ನಿಲ್ಲುತ್ತದೆ. ಈ ಆಟೋ‌ ಸ್ಟ್ಯಾಂಡ್ ಚಾಲನೆ ಮಾಡಿಸಿದ್ದೆ ಆದ್ರೆ ಪೊಲೀಸ್ ಇಲಾಖೆಯು ನೆಮ್ಮದಿಯಿಂದ ಇರಬಹುದಾಗಿದೆ. ಇದರಿಂದ ಹೊಸ ಎಸ್ಪಿಯಾಗಿ ಆಗಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅಶ್ವಿನಿ ಅವರು ಇತ್ತ ಗಮನ ಹರಿಸಿ ಪ್ರೀ- ಪೇಡ್ ಆಟೋ ಸ್ಟ್ಯಾಂಡ್ ಪ್ರಾರಂಭವಾಗುವಂತೆ ಮಾಡಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.

ABOUT THE AUTHOR

...view details