ಕರ್ನಾಟಕ

karnataka

ETV Bharat / state

ಎಂಪಿಎಂ ಕಾರ್ಖಾನೆಗೆ ಲೀಸ್​ಗೆ ನೀಡಿದ್ದ ಅರಣ್ಯ ಭೂಮಿ ಹಿಂಪಡೆಯುವಂತೆ ಪ್ರತಿಭಟನೆ - ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಒಕ್ಕೂಟ ವತಿಯಿಂದ ಪ್ರತಿಭಟನೆ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 33 ಸಾವಿರ ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್​​ಗೆ ನೀಡಲಾಗಿತ್ತು.

Protest to withdraw forest land given to MPM factory In Shimoga
ಎಂಪಿಎಂ ಕಾರ್ಖಾನೆಗೆ ಲೀಸ್​ಗೆ ನೀಡಿದ್ದ ಅರಣ್ಯ ಭೂಮಿಯನ್ನ ಹಿಂಪಡೆಯುವಂತೆ ಪ್ರತಿಭಟನೆ

By

Published : Oct 20, 2020, 10:44 AM IST

ಶಿವಮೊಗ್ಗ: ಎಂಪಿಎಂಗೆ ಲೀಸ್​ಗೆ ನೀಡಿದ್ದ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಈ ಕೂಡಲೇ ವಾಪಸ್​​ ಪಡೆದು ಅರಣ್ಯ ಇಲಾಖೆಗೆ ನೀಡುವಂತೆ ಆಗ್ರಹಿಸಿ ನಮ್ಮೂರಿಗೆ ಅಕೇಶಿಯ ಮರ ಬೇಡ ಹೋರಾಟ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಎಂಪಿಎಂ ಕಾರ್ಖಾನೆಗೆ ಲೀಸ್​ಗೆ ನೀಡಿದ್ದ ಅರಣ್ಯ ಭೂಮಿ ಹಿಂಪಡೆಯುವಂತೆ ಪ್ರತಿಭಟನೆ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಪಶ್ಚಿಮಘಟ್ಟದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಸುಮಾರು 33 ಸಾವಿರ ಹೆಕ್ಟೇರ್ ಭೂಮಿಯನ್ನು 40 ವರ್ಷಗಳ ಅವಧಿಗೆ ಲೀಸ್​​​ಗೆ ನೀಡಲಾಗಿತ್ತು. ಆದರೆ ಈಗ ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡಿದೆ. ಹಾಗೆಯೇ ಅದರಂತೆ ಎಂಪಿಎಂಗೆ ಲೀಸ್​​ಗೆ ನೀಡಿದ್ದ ಅವಧಿ ಮುಗಿದಿದೆ. ಹಾಗಾಗಿ ಸರ್ಕಾರ ಭೂಮಿಯನ್ನು ಕಬಳಿಸಲು ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಾಗದ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಿ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಲೀಸ್​​​ಗೆ ನೀಡುವ ಮೂಲಕ ಅಕೇಶಿಯ ಮರಗಳನ್ನು ಬೆಳೆಸಲು ಮುಂದಾಗಿದೆ. ಇದರಿಂದ ಮಲೆನಾಡು ಬಯಲುಸೀಮೆ ಆಗುತ್ತದೆ. ಹಾಗಾಗಿ ಸರ್ಕಾರ 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ ಕಾಡು ಬೆಳೆಸಬೇಕು. ಯಾವುದೇ ಕಾರಣಕ್ಕೂ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

For All Latest Updates

ABOUT THE AUTHOR

...view details