ಕರ್ನಾಟಕ

karnataka

ETV Bharat / state

ಶಾಲೆಯ ಪರವಾನಗಿ ರದ್ದು ಮಾಡಲು ಆಗ್ರಹಿಸಿ ಪ್ರತಿಭಟನೆ - Shimoga

ಸರ್ಕಾರದ ನಿಯಮಗಳನ್ನು ಮೀರಿ ನಡೆದುಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ಮಾರಕವಾಗಿರುವ ಭದ್ರಾವತಿಯ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದುಪಡಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು.

ಶಾಲೆಯ ಪರವಾನಿಗೆ ರದ್ದು ಮಾಡಲು ಆಗ್ರಹ

By

Published : Mar 13, 2019, 9:32 PM IST

ಶಿವಮೊಗ್ಗ: ಭದ್ರಾವತಿ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಭದ್ರಾವತಿ ಪ್ರಗತಿಪರ ಸಂಘಟನೆ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

2018 -19 ನೇ ಸಾಲಿನಲ್ಲಿ ಕೈಗೊಂಡ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬಸ್ ಅಪಘಾತಕ್ಕೆ ಕಾರಣವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಾಲೆಯ ಪರವಾನಿಗೆ ರದ್ದು ಮಾಡಲು ಆಗ್ರಹ


2018ರ ನವಂಬರ್ 10ರಂದು ಪೂರ್ಣ ಪ್ರಜ್ಞಾ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಹತ್ತಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ದಿಯಾ ಶೇಖಾವತ್ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ನಂದಿನಿ ಎಂಬ ವಿದ್ಯಾರ್ಥಿನಿಯ ಬಲಗೈ ಸಂಪೂರ್ಣ ತುಂಡಾಗಿ ಎಡಗೈಗೆ ಗಂಭೀರ ಗಾಯವಾಗಿತ್ತು. ಇದರಿಂದ ಆಕೆ ಎರಡು ಕೈ ಇಲ್ಲದೆ ಶಾಶ್ವತ ಅಂಗವಿಕಲತೆ ಅನುಭವಿಸಬೇಕಾಯಿತು ಎಂದು ಪ್ರತಿಭಟನಾಕಾರರು ದೂರಿದರು.

ಇನ್ನು ಶಾಲೆಯು ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ಸರ್ಕಾರಿ ವಾಹನ ಬಳಸಬೇಕೆಂಬ ನಿಯಮವನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲದೇ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಳ್ಳದೆ, ಪೋಷಕರ ಅನುಮತಿ ಸಹ ಪಡೆದುಕೊಳ್ಳದೆ ಪ್ರವಾಸ ಕೈಗೊಂಡು ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮೆರೆದಿದೆ ಎಂದು ದೂರಿದರು.



ABOUT THE AUTHOR

...view details