ಕರ್ನಾಟಕ

karnataka

ETV Bharat / state

ಜಮೀನಿನ ದಾಖಲೆ ನೀಡದ ಅಧಿಕಾರಿಗಳು; ಕಚೇರಿ ಮುಂದೆ ಖಾಲಿ ಖುರ್ಚಿಗೆ ಸನ್ಮಾನ ಮಾಡಿ ವಿಶೇಷ ಪ್ರತಿಭಟನೆ - Etv Bharat Kannada

ಅಧಿಕಾರಿಗಳು ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸಿದ್ಧಗೊಳಿಸದೆ ಕಚೇರಿಗಳಿಗೆ ಅಲೆದಾಡುಸುತ್ತಿದ್ದಾರೆ ಎಂದು ಖಂಡಿಸಿ ಜಮೀನು ಮಾಲೀಕರೊಬ್ಬರು ಕಚೇರಿ ಮುಂದೆ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

kn_smg_05
ತಾಲೂಕು ಕಚೇರಿ ಮುಂದೆ ಪ್ರತಿಭಟನೆ

By

Published : Oct 19, 2022, 7:47 AM IST

ಶಿವಮೊಗ್ಗ: ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತ ಜನಪ್ರತಿನಿಧಿಯೊಬ್ಬರು ಖಾಲಿ ಚೇರ್​ಗೆ ಸನ್ಮಾನ ಮಾಡಿ ವಿನೂತನ ಪ್ರತಿಭಟನೆಯನ್ನು ನಡೆಸಿದ್ದಾರೆ.

ಸೊರಬ ಪುರಸಭೆ ವಿರೋಧ ಪಕ್ಷದ ನಾಯಕರಾದ ಪ್ರಸನ್ನ ಅವರು, ಸೊರಬ ತಹಶೀಲ್ದಾರ್ ಕಚೇರಿ ಮುಂಭಾಗ ಖಾಲಿ ಚೇರನ್ನಿಟ್ಟು ಅದಕ್ಕೆ ಶಾಲು ಹಾಗೂ ಹಾರವನ್ನು ಹಾಕಿ ಸನ್ಮಾನ ಮಾಡಿ ಪ್ರತಿಭಟನೆ ನಡೆಸಿದ್ದು, ಈ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿದ್ದಾರೆ.

ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಪ್ರಸನ್ನ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಕಳೆದು ಹಾಕಿರುತ್ತಾರೆ. ನಂತರ ಇದನ್ನು ಮಿಸ್ಸಿಂಗ್ ಫೈಲ್ ಎಂದು ಭಾವಿಸಿ, ಹೊಸ ಫೈಲ್ ತಯಾರಿಸಲು ಸೂಚಿಸಲಾಗಿರುತ್ತದೆ. ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳು ಕಚೇರಿಗಳಿಗೆ ಅಲೆದಾಡಿಸುತ್ತಿದ್ದು, ಅವರ ಜಮೀನಿನ ದಾಖಲೆ ಸಿದ್ಧಗೊಳ್ಳದ ಹಿನ್ನೆಲೆ ಅದನ್ನು ಖಂಡಿಸಿ ಸೊರಬ ತಹಶೀಲ್​ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಸುರತ್ಕಲ್ ಟೋಲ್ ಗೇಟ್ ತೆರವು ಕಾರ್ಯಾಚರಣೆ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​

ABOUT THE AUTHOR

...view details