ಶಿವಮೊಗ್ಗ:ಕಾಲೇಜಿನಿಂದ ದೂರ ಇರುವ ಹಾಸ್ಟೆಲ್‌ಗೆ ನಮ್ನನ್ನ ಸ್ಥಳಾಂತರಿಸಲಾಗಿದೆ. ಇದರಿಂದ ಪ್ರತಿದಿನ ಕ್ಲಾಸ್ಗಳು ಮಿಸ್ ಆಗುತ್ತಿವೆ. ಹಾಗಾಗಿ ಮೊದಲು ನಾವು ತಂಗಿದ್ದ ವಿದ್ಯಾನಗರದ ಹಾಸ್ಟೆಲ್‌ನಲ್ಲೇ ಇರಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ದೂರದ ಹಾಸ್ಟೆಲ್ಗಾಗಿ ಶಿಫ್ಟ್ ಮಾಡಿದ್ದನ್ನ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.. - ಹಾಸ್ಟೆಲ್ಗಾಗಿ ಪ್ರತಿಭಟನೆ
ಮೊದಲಿರುವ ಹಾಸ್ಟೆಲ್ನಿಂದ ಬೇರೆ ಕಡೆಗೆ ಸ್ಥಳಾಂತಿರಿಸಲಾಗಿದೆ ಇದರಿಂದಾಗಿ ದಿನ ನಿತ್ಯ ಕಾಲೇಜಿಗೆ ಹೋಗುವುದು ತಡವಾಗುತ್ತಿದ್ದು, ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ವಿದ್ಯಾರ್ಥಿಗಳಿಂದ ಪ್ರತಿಭಟನೆ
ವಿದ್ಯಾರ್ಥಿಗಳಿಂದ ಪ್ರತಿಭಟನೆ..
ಜಿಲ್ಲಾಧಿಕಾರಿ ಕಚೇರಿ ಎದುರು ಟ್ರಂಕ್‌ಗಳನ್ನು ಇಟ್ಟು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಮಗೆ ಸೂಕ್ತ ಪರಿಹಾರ ದೊರೆಯುವವರೆಗೂ ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ಸಂಚಾರಕ್ಕೆ ಅಡೆ ತಡೆ ಉಂಟಾಗಿದ್ದು, ಪೊಲೀಸರ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಆದರೂ ಪಟ್ಟು ಬಿಡದ ವಿದ್ಯಾರ್ಥಿಗಳು ರಸ್ತೆ ಮೇಲೆಯೇ ಕೂತು ಪ್ರತಿಭಟನೆ ಮಾಡುವುದಾಗಿ ಪೊಲೀಸ್‌ರೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳನ್ನು ಹಿಡಿತಕ್ಕೆ ತರುವಷ್ಟರಲ್ಲಿ ಪೊಲೀಸರಿಗೆ ಸಾಕುಸಾಕಾಗಿ ಹೋಯ್ತು.