ಶಿವಮೊಗ್ಗ:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರು ಶನಿವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸೇರಿದ್ದ ಅಕ್ಷರ ದಾಸೋಹ ನೌಕರರು ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಬಿಸಿಯೂಟ ನೌಕರರ ಖಾತೆಗೆ ಹಣ ಜಮೆ ಮಾಡದೇ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಸ್ಡಿಎಂಸಿ ಅಧ್ಯಕ್ಷರ ಜಂಟಿ ಖಾತೆಗೆ ಬಿಸಿಯೂಟ ಕಾಂಟಿಜೆನ್ಸಿ ಹಣ ಜಮೆ ಮಾಡಲು ಆದೇಶ ಮಾಡಿದೆ. ಇದರಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಶಾಲೆಯ ಶೈಕ್ಷಣಿಕ ಅಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ತೊಂದರೆ ಆಗುತ್ತದೆ. ಆದ್ದರಿಂದ ಈ ಕಾಂಟಿಜೆನ್ಸಿಯ ಆದೇಶವನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಚುನಾವಣಾ ಸಿಬ್ಬಂದಿಗೆ ಅಡುಗೆ ಮಾಡಿ ಬಡಿಸಿದ ನೌಕರರರಿಗೆ 3 ಸಾವಿರ ರೂ. ಹಣ ಬಿಡುಗಡೆಗೆ ಒತ್ತಾಯ:''ಚುನಾವಣಾ ಪೂರ್ವ ಘೋಷಣೆ ಮಾಡಿದಂತೆ ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ವೇತನವನ್ನು ಹೆಚ್ಚಿಸಬೇಕು. ಕಳೆದ ಸರ್ಕಾರದ ಬಜೆಟ್ನಲ್ಲಿ ಘೋಷಣೆ ಮಾಡಿದಂತೆ 1 ಸಾವಿರ ರೂ. ಗೌರವಧನವನ್ನು ತಕ್ಷಣ ಜಾರಿ ಮಾಡಬೇಕು. ವಿಧಾನಸಭ ಚುನಾವಣೆಯಲ್ಲಿ ಚುನಾವಣಾ ಸಿಬ್ಬಂದಿಗೆ ಅಡುಗೆ ಮಾಡಿ ಬಡಿಸಿದ ನೌಕರರರಿಗೆ 3 ಸಾವಿರ ರೂ. ಹಣ ಬಿಡುಗಡೆ ಮಾಡಬೇಕು. ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಬಿಸಿಯೂಟ ನೌಕರರನ್ನು ತಕ್ಷಣ ನೇಮಕ ಮಾಡಬೇಕು. ಶಾಲಾ ಶಿಕ್ಷಕರು ಹಾಗೂ ಎಸ್ಡಿ ಎಂಸಿಯವರು ಬಿಸಿಯೂಟ ನೌಕರರಿಗೆ ನೀಡುವ ಕಿರುಕುಳ ತಪ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷರಾದ ಹುನುಮಕ್ಕ, ಕಾರ್ಯದರ್ಶಿ ಸುನೀತ ಸೇರಿ ಇತರರಿದ್ದರು.
ಇದನ್ನೂ ಓದಿ:ಮರಾಠಿಯಲ್ಲಿದ್ದ ಅರ್ಜಿಯನ್ನು ಅಚ್ಚ ಕನ್ನಡದಲ್ಲೇ ತುಂಬಿದ ಭೂಪ.. ಮಹಾರಾಷ್ಟ್ರ ವಿದ್ಯಾರ್ಥಿಯ ಕನ್ನಡ ಟಿಸಿ ವೈರಲ್!