ಕರ್ನಾಟಕ

karnataka

ETV Bharat / state

ಬೈಕ್ ಹೊತ್ತು ಅಣಕು ಶವ ಯಾತ್ರೆ.. ಇಂಧನ ಬೆಲೆಯೇರಿಕೆ ಖಂಡಿಸಿ ಪ್ರತಿಭಟನೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದರ ಇಳಿಕೆಯಾಗಿದ್ದರೂ ಸಹ ದಿನದಿಂದ‌ ದಿನಕ್ಕೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿದೆ. ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಎನ್​​​ಎಸ್​​ಯುಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

protest by NSUI at shimogga
ಹೆಗಲಮೇಲೆ ಬೈಕ್ ಹೊತ್ತು ಅಣಕು ಶವ ಯಾತ್ರೆ ನಡೆಸಿದ ಜಿಲ್ಲಾ ಎನ್​​​ಎಸ್​​ಯುಐ ಕಾರ್ಯಕರ್ತರು

By

Published : Feb 13, 2021, 3:34 PM IST

ಶಿವಮೊಗ್ಗ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ‌ ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಜಿಲ್ಲಾ ಎನ್​ಎಸ್​​ಯುಐ ಕಾರ್ಯಕರ್ತರು ಹೆಗಲ ಮೇಲೆ ಬೈಕ್ ಹೊತ್ತುಕೊಂಡು ಅಣಕು ಶವಯಾತ್ರೆ ನಡೆಸಿದರು.

ಶಿವಮೊಗ್ಗ ಜಿಲ್ಲಾ ಎನ್​​​ಎಸ್​​ಯುಐ ಕಾರ್ಯಕರ್ತರಿಂದ ಪ್ರತಿಭಟನೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದರ ಇಳಿಕೆಯಾಗಿದ್ದರೂ ಸಹ ದಿನದಿಂದ‌ ದಿನಕ್ಕೆ ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗುತ್ತಿದೆ. ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗುತ್ತಿಲ್ಲ ಎಂದು ಎನ್​​​ಎಸ್​​ಯುಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನೂ ಓದಿ:ರಾಣೆಬೆನ್ನೂರಲ್ಲಿ ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಕೊರೊನಾ ತಂದಿಟ್ಟ ಸಂಕಷ್ಟದಲ್ಲಿ ಬಡಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಜನರಿಗೆ ನೆರವು ನೀಡಬೇಕಿದ್ದ ಸರ್ಕಾರ ಜನರಿಂದಲೇ ಹಣ ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಅಚ್ಛೇ ದಿನ್ ಇದೇನಾ ಎಂದು ಪ್ರತಿಭಟನಾನಿರತರು ಪ್ರಶ್ನೆ ಮಾಡಿದರು. ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಇಳಿಕೆ ಮಾಡದಿದ್ದರೆ ಮುಂದಿನ‌ ಚುನಾವಣೆಗಳಲ್ಲಿ ದೇಶ‌ದ ಜನರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕೂಡಲೇ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಇಳಿಸುವಂತೆ ಆಗ್ರಹಿಸಿದರು.

ಅಣಕು ಶವಯಾತ್ರೆ ಮೆರವಣಿಗೆಗೆ ಸಿಗದ ಅನುಮತಿ:

ಹೆಗಲ ಮೇಲೆ‌ ಬೈಕ್ ಹೊತ್ತುಕೊಂಡು ಅಣಕು ಶವಯಾತ್ರೆಯ ಮೆರವಣಿಗೆ ನಡೆಸಲು ಮುಂದಾದರು. ಮೆರವಣಿಗೆಗೆ ಪೊಲೀಸರು ಅವಕಾಶ ನೀಡಲು ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಮಹಾವೀರ ವೃತ್ತದಲ್ಲಿ ಅಣಕು ಶವ ಯಾತ್ರೆ ನಡೆಸಲಾಯಿತು.

ABOUT THE AUTHOR

...view details