ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದ ಕಂಟೈನ್ಮೆಂಟ್ ವಲಯದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.
ಕಂಟೈನ್ಮೆಂಟ್ ವಲಯದಲ್ಲಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ - containment zone
ಕಂಟೈನ್ಮೆಂಟ್ ಪ್ರದೇಶದಲ್ಲಿರುವ ನಮಗೆ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಆಗೋದಿಲ್ಲ. ಅನಾರೋಗ್ಯ ಎಂದರು ಸಹ ನಮ್ಮನ್ನು ವಿಚಾರಿಸಿಕೊಳ್ಳುವವರಿಲ್ಲ. ಇದರಿಂದ ನಾವು ನಮ್ಮ ಮನೆಯಲ್ಲೇ ನರಕ ಅನುಭವಿಸುವಂತಾಗಿದೆ ಎಂದು ಶಿಕಾರಿಪುರದ ಕಂಟೈನ್ಮೆಂಟ್ ವಲಯದ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಂಟೈನ್ಮೆಂಟ್ ವಲಯದಲ್ಲಿ ಕಳೆದ ಒಂದು ವಾರದಿಂದ ಸ್ಯಾನಿಟೈಸ್ ಮಾಡಿಲ್ಲ. ಚರಂಡಿಗಳಿಗೆ ಔಷಧ ಸಿಂಪಡಣೆ ಮಾಡಿಲ್ಲ. ನಮ್ಮ ಕಷ್ಟ ಆಲಿಸಬೇಕಾದ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ ಎಂದು ತಾಲೂಕಿನ ಕುಂಬಾರ ಬೀದಿಯ ನಿವಾಸಿಗಳು ಆರೋಪಿಸಿದರು.
ಕಂಟೈನ್ಮೆಂಟ್ ಪ್ರದೇಶದಲ್ಲಿರುವ ನಮಗೆ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಆಗೋದಿಲ್ಲ. ಅನಾರೋಗ್ಯ ಎಂದರು ಸಹ ನಮ್ಮನ್ನು ವಿಚಾರಿಸಿಕೊಳ್ಳುವವರಿಲ್ಲ. ಇದರಿಂದ ನಾವು ಮನೆಯಲ್ಲೇ ನರಕ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಅಂತರದಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸುವ ಯತ್ನ ಮಾಡಿದರು.