ರಾಜ್ಯವನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಧರಣಿ ಶಿವಮೊಗ್ಗ : ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಧರಣಿ ಸತ್ಯಾಗ್ರಹ ನಡೆಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ, ಕರ್ನಾಟಕದಲ್ಲಿ ಭೀಕರವಾದ ಬರಗಾಲವಿದೆ. ಇವತ್ತು 195 ತಾಲೂಕುಗಳನ್ನು ಘೋಷಣೆ ಮಾಡಿರುವುದು ಸಾಲದು, ರಾಜ್ಯದ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಜೊತೆಗೆ ಬೆಳೆ ಸಮೀಕ್ಷೆ ಮಾಡಿ ಎಕೆರೆಗೆ 25 ಸಾವಿರ ರೂ. ನೀಡಬೇಕು. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಸಾಧ್ಯವಿಲ್ಲ. ಅಲ್ಲದೆ, ಹಗಲಿನಲ್ಲಿ 7 ಗಂಟೆ ಸಮರ್ಪಕ ವಿದ್ಯುತ್ ನೀಡಬೇಕು ಮತ್ತು ವಿದ್ಯುತ್ ಚ್ಚಕ್ತಿಯನ್ನು ಖಾಸಗೀಕರಣ ಮಾಡಬಾರದು. ರೈತರ ಎಲ್ಲಾ ವಸೂಲಾತಿಯನ್ನು ನಿಲ್ಲಿಸಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬಗರ್ ಹುಕುಂ ಸಾಗುವಳಿ ಹಕ್ಕುಪತ್ತವನ್ನು ನೀಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ :ಕಾವೇರಿ ನೀರು ಹಂಚಿಕೆಗೆ ಶಾಶ್ವತ ಸಂಕಷ್ಟ ಸೂತ್ರ ರಚಿಸಿ: ಪ್ರಾಧಿಕಾರಕ್ಕೆ ಎಂಎಲ್ಸಿ ಗೂಳಿಗೌಡ ಪತ್ರ
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿದೆ. ನೀರಾವರಿ ಮಂತ್ರಿಗಳು ಎಡವಿದ್ದಾರೆ. ಕೋರ್ಟ್ ಮತ್ತು ಪ್ರಾಧಿಕಾರದ ಆದೇಶ ಬರುವ ಮೊದಲೇ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದು ದೊಡ್ಡ ತಪ್ಪು. ಈಗಲೂ ಇದೇ ರೀತಿ ನೀರನ್ನು ಬಿಡುತ್ತಾ ಹೋದರೇ ರಾಜ್ಯದ ಜನರಿಗೆ ಕುಡಿಯುವುದಕ್ಕೆ ನೀರು ಇಲ್ಲದೆ ಬಹಳ ಸಂಕಷ್ಟವಾಗುತ್ತದೆ. ಕಾವೇರಿ ಕುರಿತು ನಾಳೆ ಸೇರಿದಂತೆ ಮುಂದೆ ನಡೆಯುವ ಎಲ್ಲಾ ಹೋರಾಟಗಳಿಗೆ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ಸೆ.26 ರಂದು ಶಾಂತಿಯುತವಾಗಿ ಬೆಂಗಳೂರು ಬಂದ್ : ಕಪ್ಪುಪಟ್ಟಿ ಧರಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರು.. ಐಟಿ ವಲಯದ ಬೆಂಬಲ
ಈ ವರ್ಷ ಕಂಡು ಕಾಣದ ಬರಗಾಲ ಬಂದೆರಗಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದು, ಮಳೆ ಕೈ ಕೊಟ್ಟಿದೆ. ಮಳೆಯನ್ನೇ ನಂಬಿ ಕೃಷಿ ಕಾರ್ಯ ನಡೆಸಿದ ರೈತ ಈಗ ಹಾಕಿದ ಬೆಳೆ ಬಾರದೆ ಕೈಯನ್ನು ತಲೆಮೇಲೆ ಹೊತ್ತು ಕುಳಿತುಕೊಳ್ಳುವಂತಾಗಿದೆ. ಆದರೆ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ರೈತ ದೈನಂದಿನ ಬದುಕಿದಾಗಿ, ಕೃಷಿ ಉಳಿವಿಗಾಗಿ ಮಕ್ಕಳ ಭವಿಷ್ಯಕ್ಕಾಗಿ ಪರದಾಡುವಂತಾಗಿದೆ. ಬೆಳೆ ಇಲ್ಲದೆ, ತನ್ನಲ್ಲಿರುವ ಎಲ್ಲವನ್ನು ಬೆಳೆಗೆ ಹಾಕಿ ಕೈ ಖಾಲಿಯಾಗಿರುವ ರೈತನಿಗೆ ಬ್ಯಾಂಕ್ ಸೇರಿದಂತೆ ಖಾಸಗಿ ಫೈನಾಲ್ಸ್ ನವರು ಸಾಲ ವಸೂಲಾತಿ ಹೆಸರಿನಲ್ಲಿ ಕಾಟ ಕೊಡುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರ ಸಂಪೂರ್ಣ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಬೇಕು ಪ್ರತಿಭಟನೆಯಲ್ಲಿ ರೈತರು ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ :Cauvery issue: ಕಾವೇರಿ ವಿಚಾರವಾಗಿ ಪ್ರಧಾನಿ ಮಧ್ಯಸ್ಥಿಕೆ ಕೋರಿ ದೇವೇಗೌಡರು ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಸ್ವಾಗತ