ಕರ್ನಾಟಕ

karnataka

ಎಸ್ ಸಿ ಪಿ ಟಿ ಎಸ್ ಪಿ ಹಣ ದುರುಪಯೋಗ: ಧರಣಿ ನಡೆಸುತ್ತಿದ್ದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು

By

Published : Feb 14, 2023, 1:00 PM IST

Updated : Feb 14, 2023, 2:26 PM IST

ಎಸ್ ಸಿ ಪಿ ಟಿ ಎಸ್ ಪಿ ಯೋಜನೆಯ ಹಣ ದುರುಪಯೋಗ ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ದಲಿತ‌ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು.

Protest by DSS workers in Shimoga
ಡಿ ಎಸ್ ಎಸ್ ಕಾರ್ಯಕರ್ತರಿಂದ ಪ್ರತಿಭಟನೆ

ಪ್ರತಿಭಟನೆ ನಡೆಸುತ್ತಿರುವ ಡಿ ಎಸ್ ಎಸ್ ಕಾರ್ಯಕರ್ತರು

ಶಿವಮೊಗ್ಗ: ಜಿಲ್ಲಾಧಿಕಾರಿ‌ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಡಿಎಸ್ಎಸ್ ಕಾರ್ಯಕರ್ತರನ್ನು ಪೊಲೀಸರು ರಾತ್ರೋ ರಾತ್ರಿ ಕರೆದುಕೊಂಡು ಹೋಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಎಸ್ ಸಿ ಪಿ ಟಿ ಎಸ್ ಪಿ ಯೋಜನೆಯ ಹಣ ದುರುಪಯೋಗ, ಕಳಪೆ ಕಾಮಗಾರಿಯನ್ನು ಖಂಡಿಸಿ ನಿನ್ನೆ ಬೆಳಗ್ಗೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದ ದಲಿತ‌ ಸಂಘರ್ಷ ಸಮಿತಿ( ಅಂಬೇಡ್ಕರ ವಾದ) ಕಾರ್ಯಕರ್ತರನ್ನು ಪೊಲೀಸರು ರಾತ್ರೋರಾತ್ರಿ ಕರೆದುಕೊಂಡು ಹೋಗಿ ಪೊಲೀಸ್ ಡಿ ಎ ಆರ್ ಮೈದಾನದಲ್ಲಿ ಬಿಟ್ಟಿದ್ದಾರೆ. ಇದರಿಂದ ತಮ್ಮನ್ನು ಅಕ್ರಮವಾಗಿ ಕರೆದುಕೊಂಡು ಬಂದ ಪೊಲೀಸ್ ಇಲಾಖೆಯ ವಿರುದ್ದ ಡಿ ಎಸ್ ಎಸ್ ಕಾರ್ಯಕರ್ತರು ಡಿ.ಎ ಆರ್ ಮೈದಾನದಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.

2014 ನೇ ಸಾಲಿನಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉಪ ಯೋಜನೆಗಳ ಅನುಷ್ಟಾನಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಬಿಡುಗಡೆಯಾದ ಹಣವನ್ನು ಸರಿಯಾಗಿ ದಲಿತರಿಗೆ ತಲುಪಿಸಿಲ್ಲ. ಸರ್ಕಾರ ಈ ಯೋಜನೆಯ ಹಣವನ್ನು ಬೇರೆ ಯೋಜನೆಗೆ ನೀಡಿದೆ. ಪರಿಶಿಷ್ಟರ ಕಾಲೋನಿಗಳಿಗೆ ನೀಡುವ ಹಣ ಮೇಲ್ವರ್ಗದ ಕಾಲೋನಿಗೆ ನೀಡಲಾಗಿದೆ.

ಇದು ಹೆಚ್ಚಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ‌ ನಡೆದಿದೆ. ಇದರಿಂದ ಈ ಬಗ್ಗೆ ತಕ್ಷಣ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಬೇಕೆಂದು ಅಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ಆದರೆ ಪೊಲೀಸರು‌ ಏಕಾಏಕಿ ತಮ್ಮನ್ನು ಕ್ರಿಮಿನಲ್ ಗಳ ರೀತಿಯಲ್ಲಿ ಬಂಧಿಸಿ ಕರೆ ತಂದು ಪ್ರಜಾಪ್ರಭುತ್ವದ ಕಗ್ಗೂಲೆ ಮಾಡಲು ಹೊರಟಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹಾಲೇಶಪ್ಪ ದೂರವಾಣಿಯಲ್ಲಿ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ಜಿಲ್ಲೆಯ ಭದ್ರಾವತಿ ಕಬ್ಬಿಣ, ಉಕ್ಕಿನ ಕಾರ್ಖಾನೆ ಮುಚ್ಚುವ ತೀರ್ಮಾನ; ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಇರುವ 102 ವರ್ಷ ಹಳೆಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದ್ದು, ಇದಕ್ಕೆ ಕಾಂಗ್ರೆಸ್​ ಪಕ್ಷದವರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಕಾರ್ಖಾನೆ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿದ ಹಣಕಾಸು ಇಲಾಖೆ ರಾಜ್ಯ ಸಚಿವ ಭಾಗವತ್​ ಕರದ್​ ಕಾರ್ಖಾನೆಯು ತೀರ ಹಳೆಯದಾದ್ದರಿಂದ ಅದರ ಪುನರುಜ್ಜೀವನಕ್ಕೆ ಹಲವಾರು ಪ್ರಯತ್ನಗಳ ಹೊರತಾಗಿಯೂ ಫಲ ಕಾಣದೆ ಇರುವುದರಿಂದ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇಂದ್ರದ ಈ ನಿರ್ಧಾರಕ್ಕೆ ಕಾಂಗ್ರೆಸಿಗರು ಟೀಕಿಸಿದ್ದಾರೆ.

ಭದ್ರಾವತಿಯ ಈ ಕಾರ್ಖಾನೆಯನ್ನು ಉಳಿಸಿಕೊಳ್ಳಲು ನಷ್ಟದಲ್ಲಿ ಇದ್ದುದರಿಂದ ಸರ್ಕಾರ ಖಾಸಗೀಕರಣಗೊಳಿಸಲು ಪ್ರಯತ್ನಿಸಿತ್ತು. ಇದರಂತೆ 2019 ರ ಜುಲೈನಲ್ಲಿ ಕಾರ್ಖಾನೆಯನ್ನು ಮಾರಾಟ ಮಾಡಲು ಟೆಂಡರ್​ ಕೂಡ ಕರೆಯಲಾಗಿತ್ತು. ಆದರೆ ನಷ್ಟದಲ್ಲಿರುವುದರಿಂದ ಕಾರ್ಖಾನೆಯನ್ನು ನಡೆಸಿಕೊಂಡು ಹೋಗಲು ಯಾರು ಮುಂದೆ ಬರದೇ ಇದ್ದದಲ್ಲದೇ, ಘಟಕ ಅನುತ್ಪಾದಿತವಾಗಿದೆ. ಹೀಗಾಗಿ ಮುಚ್ಚಲು ಈ ನಿರ್ಧಾರ ತೆಗೆದುಕೊಳ್ಳಾಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:102 ವರ್ಷಗಳ ಹಳೆಯ ಭದ್ರಾವತಿ ಕಬ್ಬಿಣ, ಉಕ್ಕಿನ ಕಾರ್ಖಾನೆ ಮುಚ್ಚಲು ತೀರ್ಮಾನ: ಕೇಂದ್ರದ ಹೇಳಿಕೆ.. ಕಾಂಗ್ರೆಸ್​ ಟೀಕೆ

Last Updated : Feb 14, 2023, 2:26 PM IST

ABOUT THE AUTHOR

...view details