ಶಿವಮೊಗ್ಗ:ಡ್ರಗ್ಸ್ ದಂಧೆ ವಿರುದ್ದ ಬಿಜೆಪಿ ಯುವ ಮೋರ್ಚಾ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು.
ಡ್ರಗ್ಸ್ ದಂಧೆ ವಿರುದ್ದ ಬಿಜೆಪಿಯ ಯಡಿಯೂರಪ್ಪ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಗೃಹ ಸಚಿವಾಲಯ ಹಾಗೂ ಪೊಲೀಸ್ ಇಲಾಖೆಯನ್ನು ಸಮರ್ಥವಾಗಿ ಬಳಸಿ ಕೊಂಡು ಡ್ರಗ್ಸ್ ದಂಧೆಗೆ ಕಡಿವಾಣ ಹಾಕುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಡ್ರಗ್ಸ್ ಮಾಫಿಯಾದ ಕುರಿತು ಕಠಿಣ ಕ್ರಮ ಮುಂದುವರೆಸಿ, ಡ್ರಗ್ಸ್ ಮಾಫಿಯಾಗೆ ಬ್ರೇಕ್ ಹಾಕಬೇಕಿದೆ. ಡ್ರಗ್ಸ್ನಿಂದ ಯುವ ಪೀಳಿಗೆ ನಾಶವಾಗುತ್ತಿದೆ. ಕುಟುಂಬಗಳು ದಿವಾಳಿಯಾಗಿವೆ. ದೇಶದ ಯುವ ಸಂಪತ್ತು ಡ್ರಗ್ಸ್ ಮಾಫಿಗೆ ಬಲಿಯಾಗುತ್ತಿದೆ ಎಂದರು.
ಇದನ್ನು ತಡೆದು ನಿಪಕ್ಷಪಾತವಾಗಿ ತನಿಖೆ ನಡೆಸಿ, ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಹರಿಕೃಷ್ಣ, ಪ್ರಭಾರಿ ದಿನೇಶ್ ಸೇರಿ ಕಾರ್ಯಕರ್ತರು ಹಾಜರಿದ್ದರು.