ಶಿವಮೊಗ್ಗ :ಜಿಲ್ಲಾ ಪಂಚಾಯತ್ ಇಷ್ಟು ದಿನ ಕೋರಂ ಕೊರತೆ, ಅಧ್ಯಕ್ಷರ ಬದಲಾವಣೆ, ಅನುದಾನ ಹಂಚಿಕೆ ತಾರತಮ್ಯ ಅಂತಾ ಸುದ್ದಿಯಲ್ಲಿತ್ತು. ಆದ್ರೆ, ಇವತ್ತು ಇಲ್ಲಿನ ಸಿಬ್ಬಂದಿ ಜಿಲ್ಲಾ ಪಂಚಾಯತ್ನ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾ ಪಂಚಾಯತ್ನ ಆಡಳಿತ ವಿಭಾಗದ ಅಧೀಕ್ಷಕರಾದ ವಿಕ್ಟೋರಿಯಾ ಮೇರಿ ಎಂಬುವರಿಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವೀರಭದ್ರಪ್ಪ ಪೂಜಾರ್ ಅವರು ಕಚೇರಿಗೆ ತೆರಳಿ ಕೀಳಾಗಿ ಮಾತನಾಡಿದ್ದಾರೆ. ಮಹಿಳಾ ಸಿಬ್ಬಂದಿಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಿಂದಿಸಿದ್ದು, ಬೆದರಿಕೆ ಹಾಕಿದ್ದು ಸರಿಯಲ್ಲ.
ಇದರಿಂದ ವೀರಭದ್ರಪ್ಪ ಪೂಜಾರ್ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಜಿಪಂನ ಎಲ್ಲಾ ನೌಕರರು ಜಿಪಂ ಸಿಇಒ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟಿಸಿದರು. ತಮ್ಮ ವಿರುದ್ಧ ನಡೆದ ಪ್ರತಿಭಟನೆಯ ಬಗ್ಗೆ ಸಾಮೂಹಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಭದ್ರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.