ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿರೋಧಿಸಿ ಪ್ರತಿಭಟನೆ - ಶಿವಮೊಗ್ಗ, ರಸ್ತೆ ಅಗಲೀಕರಣ, ಪ್ರತಿಭಟನೆ, ಮಲವಗೊಪ್ಪ, ಜಿಲ್ಲಾಧಿಕಾರಿ ಕಚೇರಿ , ಹೆದ್ದಾರಿ ಪ್ರಾಧಿಕಾರ , ಚತುಷ್ಟಥ ರಸ್ತೆ ನಿರ್ಮಾಣ, ಧರಣಿ

ಮಲವಗೊಪ್ಪ ದಲ್ಲಿ ಈ ಹಿಂದೆ ಚತುಷ್ಟಥ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮುಂದೆ ರಸ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆ ಕಾರಣ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದರೆ ಈಗ ಮತ್ತೊಮ್ಮೆ ರಸ್ತೆ ಅಗಲೀಕರಣ ಮಾಡುತ್ತೇವೆ ಎಂದು ಹೊರಟಿರುವುದರಿಂದ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುತ್ತಾರೆ. ಹಾಗೇಯೆ ಪುರಾತನ ದೇವಾಲಯಗಳಿಗೆ ಹಾನಿ ಉಂಟಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡಬಾರದು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿರೋಧಿಸಿ ಪ್ರತಿಭಟನೆ

By

Published : Jul 19, 2019, 11:02 AM IST

ಶಿವಮೊಗ್ಗ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿರೋಧಿಸಿ ಮಲವಗೊಪ್ಪ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 206 ಮಲವಗೊಪ್ಪ ಭಾಗದಲ್ಲಿ ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣ ವಾಗಿದೆ. ಹೆದ್ದಾರಿ ಪ್ರಾಧಿಕಾರ ಮತ್ತೊಮ್ಮೆ ರಸ್ತೆ ಅಗಲೀಕರಣ ಮಾಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅಗಲೀಕರಣ ಮಾಡಬಾರದು ಎಂದು ಧರಣಿ ನಿರತರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಮಲವಗೊಪ್ಪ ದಲ್ಲಿ ಈ ಹಿಂದೆ ಚತುಷ್ಟಥ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮುಂದೆ ರಸ್ತೆ ವಿಸ್ತರಣೆ ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಆ ಕಾರಣ ಆಕ್ಷೇಪಣೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ನಂತರದಲ್ಲಿ ರಸ್ತೆ ಪಕ್ಕದ ಜಾಗದಲ್ಲಿ ಮನೆ, ಮಳಿಗೆಗಳು, ದೇವಾಲಯಗಳು, ಶಾಲೆ ನಿರ್ಮಿಸಿಕೊಂಡು ಸ್ಥಳೀಯ ನಿವಾಸಿಗಳು ಜೀವನ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಿರೋಧಿಸಿ ಪ್ರತಿಭಟನೆ

ಆದರೆ ಈಗ ಮತ್ತೊಮ್ಮೆ ರಸ್ತೆ ಅಗಲೀಕರಣ ಮಾಡುತ್ತೇವೆ ಎಂದು ಹೊರಟಿರುವುದರಿಂದ ಜನರು ತಮ್ಮ ಮನೆಗಳನ್ನು ಕಳೆದುಕೊಳ್ಳುತ್ತಾರೆ. ಹಾಗೇಯೆ ಪುರಾತನ ದೇವಾಲಯಗಳಿಗೆ ಹಾನಿ ಉಂಟಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ರಸ್ತೆ ಅಗಲೀಕರಣ ಮಾಡಬಾರದು ಎಂದು ಆಗ್ರಹಿಸಿದರು.

For All Latest Updates

ABOUT THE AUTHOR

...view details