ಶಿವಮೊಗ್ಗ:ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸಾಗರ ತಾಲೂಕಿನ ಗೌತಮಪುರದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೂಲಸೌಕರ್ಯಗಳನ್ನು ಒದಗಿಸಲು ಆಗ್ರಹ.. ಗೌತಮಪುರ ನಿವಾಸಿಗಳಿಂದ ಪ್ರತಿಭಟನೆ.. - ಗೌತಮಪುರ ನಿವಾಸಿಗಳ ಪ್ರತಿಭಟನೆ ಸುದ್ದಿ
ಮೂಲಸೌಕರ್ಯಗಳನ್ನು ಒದಗಿಸವಂತೆ ಆಗ್ರಹಿಸಿ ಸಾಗರ ತಾಲೂಕಿನ ಗೌತಮಪುರದ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ
ಮೂಲಸೌಕರ್ಯಗಳನ್ನ ಒದಗಿಸಲು ಆಗ್ರಹಿಸಿ ಗೌತಮ್ಪುರ ನಿವಾಸಿಗಳ ಪ್ರತಿಭಟನೆ..
ಸಾಗರ ತಾಲೂಕಿನ ಗೌತಮಪುರದಲ್ಲಿ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ವಾಸವಿರುವ ನಿವಾಸಿಗಳಿಗೆ ಈವರೆಗೂ ಯಾವುದೇ ರೀತಿಯ ಮೂಲ ಸೌಕರ್ಯಗಳನ್ನು ಸರ್ಕಾರ ನೀಡಿಲ್ಲ. ಕುಡಿಯುವ ನೀರು, ವಿದ್ಯುತ್, ಸಮರ್ಪಕ ರಸ್ತೆ ಇದ್ಯಾವುದೂ ಇಲ್ಲದೇ ಬದುಕು ಸಾಗಿಸುತ್ತಿದ್ದೇವೆ. ಈ ಹಿಂದೆ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗೌತಮಪುರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ತಮಗೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.