ಕರ್ನಾಟಕ

karnataka

ETV Bharat / state

ಮೋದಿಯಂತ ಒಬ್ಬ ರಾಕ್ಷಸ ಪ್ರಧಾನಿಯಾಗಿರುವುದು ಕಣ್ಣೀರು ತರಿಸಿದೆ: ಕಾಗೋಡು ತಿಮ್ಮಪ್ಪ ಆಕ್ರೋಶ! - protest against citizenship act

ಸಾಗರದಲ್ಲಿ ಪೌರತ್ವ ಅಂಗೀಕೃತ ಮಸೂದೆ ವಿರುದ್ಧ ಪ್ರತಿಭಟನೆ ನಡೆದಿದ್ದು, ಭಾರತದಂತಹ ಒಳ್ಳೆಯ ದೇಶದಲ್ಲಿ ಮೋದಿಯಂತಹ ಒಬ್ಬ ರಾಕ್ಷಸ ಪ್ರಧಾ‌ನಿಯಾಗಿರುವುದು ನನಗೆ ಕಣ್ಣೀರು ತರಿಸಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಸಮಧಾನ ಹೊರಹಾಕಿದ್ದಾರೆ.

protest against citizenship act at Sagara
ಮೋದಿ ಒಬ್ಬ ರಾಕ್ಷಸ : ಕಾಗೋಡು ತಿಮ್ಮಪ್ಪ ಬೇಸರ !

By

Published : Dec 17, 2019, 7:40 PM IST

ಶಿವಮೊಗ್ಗ: ಭಾರತದಂತಹ ಒಳ್ಳೆಯ ದೇಶದಲ್ಲಿ ಮೋದಿಯಂತಹ ಒಬ್ಬ ರಾಕ್ಷಸ ಪ್ರಧಾ‌ನಿಯಾಗಿರುವುದು ನನಗೆ ಕಣ್ಣೀರು ತರಿಸಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಮೋದಿ ಒಬ್ಬ ರಾಕ್ಷಸ : ಕಾಗೋಡು ತಿಮ್ಮಪ್ಪ ಬೇಸರ !

ಸಾಗರದಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಗೋಡು ತಿಮ್ಮಪ್ಪ, ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾದ ಮೇಲೆ ಯುದ್ಧದ ಹಪಾಹಪಿ ಜಾಸ್ತಿಯಾಗಿದೆ. ಇದರಿಂದ ಪ್ರತೀ ವರ್ಷ ಯುದ್ಧಕ್ಕಾಗಿ ಬಂದೂಕು, ಟ್ಯಾಂಕರ್ ಗಳನ್ನು ಜಾಸ್ತಿ ಮಾಡ್ತಾ ಇದ್ದಾರೆ ಎಂದು ಅಸಮಧಾನ ಹೊರಹಾಕಿದರು.

ಅಷ್ಟೇ ಅಲ್ಲದೇ, ಪೌರತ್ವ ಕಾಯಿದೆ ತಂದು ದೇಶವನ್ನು ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಿದ್ದವು.

ABOUT THE AUTHOR

...view details