ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಬಸ್​ಗೆ ಖಾಸಗಿ ಬಸ್ ಡಿಕ್ಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು - ಕೆಸ್​ಆರ್​ಟಿಸಿ ಬಸ್​ಗೆ ಖಾಸಗಿ ಬಸ್ ಡಿಕ್ಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಹೊಸನಗರದಿಂದ ಸಿಗಂದೂರು ಮಾರ್ಗವಾಗಿ ಸಾಗುವ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ​ ಹೆಚ್ಚಿನ ಹಾನಿಯಾಗಿದೆ.

Private bus collides with KSRTC bus at Shimogga
ಕೆಎಸ್​ಆರ್​ಟಿಸಿ ಬಸ್​ಗೆ ಖಾಸಗಿ ಬಸ್ ಡಿಕ್ಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

By

Published : Dec 15, 2019, 7:07 AM IST

ಶಿವಮೊಗ್ಗ: ಕೆಎಸ್​ಆರ್​ಟಿಸಿ ಬಸ್​ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿರುವ ಘಟನೆ ಹೊಸನಗರ ತಾಲೂಕು ಹೊಸಕೊಪ್ಪ ಬಳಿ ನಡೆದಿದೆ.

ಹೊಸನಗರದಿಂದ ಸಿಗಂದೂರು ಮಾರ್ಗವಾಗಿ ಸಾಗುವ ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕೆಎಸ್​ಆರ್​ಟಿಸಿ ಬಸ್​ಗೆ​ ಹೆಚ್ಚಿನ ಹಾನಿಯಾಗಿದೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸನಗರದಿಂದ ಸಿಗಂದೂರು ಮಾರ್ಗ ಅತ್ಯಂತ ಕಿರಿದಾಗಿದೆ. ಅಲ್ಲದೆ ರಸ್ತೆಗಳಲ್ಲಿ ಸಾಕಷ್ಟು ತಿರುವುಗಳಿವೆ. ತಿರುವುಗಳಿರುವುದರಿಂದ ಅಪಘಾತ ನಡೆಯುತ್ತವೆ ಎನ್ನಲಾಗಿದೆ.

ಸ್ಥಳಕ್ಕೆ ಕಾರ್ಗಲ್ ಪೊಲೀಸರು ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ. ಬಸ್​ಗಳನ್ನು ರಸ್ತೆ ಬದಿಯಿಂದ ತೆಗೆದು ಸಂಚಾರಕ್ಕೆ ಅನುವು ಮಾಡಲಾಗಿದೆ.

For All Latest Updates

ABOUT THE AUTHOR

...view details