ಕರ್ನಾಟಕ

karnataka

ETV Bharat / state

ಅತಿ ವೇಗ ತಂದ ಆಪತ್ತು: ಖಾಸಗಿ ಬಸ್ ಪಲ್ಟಿಯಾಗಿ 10 ಕ್ಕೂ ಹೆಚ್ಚು ಜನರಿಗೆ ಗಾಯ - ಶಿವಮೊಗ್ಗದಲ್ಲ ಚಾಲಕನ ಅತಿವೇಗಕ್ಕೆ ಖಾಸಗಿ ಬಸ್ ಪಲ್ಟಿ

ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 10 ಕ್ಕೂ‌ ಹೆಚ್ಚು‌ ಜನ ಗಾಯಗೊಂಡಿರುವ ಘಟನೆ ಪಿಳ್ಳಂಗಿರಿ ಗ್ರಾಮದ ಬಳಿ ನಡೆದಿದೆ. ಈ ದುರ್ಘಟನೆಗೆ ಚಾಲಕನ ಧಾವಂತವೇ ಕಾರಣವೆಂದು ಹೇಳಲಾಗ್ತಿದೆ.

private-bus-accident-near-shimoga
ಚಾಲಕನ ಅತಿವೇಗಕ್ಕೆ ಖಾಸಗಿ ಬಸ್ ಪಲ್ಟಿ...10 ಕ್ಕೂ ಹೆಚ್ಚು ಜನರಿಗೆ ಗಾಯ..

By

Published : Jan 21, 2020, 5:54 PM IST

ಶಿವಮೊಗ್ಗ:ಚಾಲಕನ ಧಾವಂತಕ್ಕೆ ಖಾಸಗಿ ಬಸ್ಸೊಂದು ಪಲ್ಟಿಯಾಗಿ 10 ಕ್ಕೂ‌ ಹೆಚ್ಚು‌ ಜನ ಗಾಯಗೊಂಡಿರುವ ಘಟನೆ ಜಿಲ್ಲೆಯ ಪಿಳ್ಳಂಗಿರಿ ಗ್ರಾಮದ ಬಳಿ ನಡೆದಿದೆ.

ಹೊಸದುರ್ಗ-ಶಿವಮೊಗ್ಗಕ್ಕೆ ಓಡಾಡುವ ಬಸ್ ಪಲ್ಟಿಯಾಗಿದ್ದು, ಹೊಸದುರ್ಗದಿಂದ ಶಿವಮೊಗ್ಗಕ್ಕೆ ಬರುವಾಗ ಜಾವಳ್ಳಿಯಿಂದ ಪಿಳ್ಳಂಗಿರಿ ಬಳಿ ಬರುವ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ... 10 ಕ್ಕೂ ಹೆಚ್ಚು ಜನರಿಗೆ ಗಾಯ

ಬಸ್ ನಲ್ಲಿ ಸುಮಾರು 52 ಜನ ಪ್ರಯಾಣಿಕರಿದ್ದರು ಎನ್ನಲಾಗ್ತಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details