ಕರ್ನಾಟಕ

karnataka

ETV Bharat / state

ಪತ್ನಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಲೇ ನೇಣಿಗೆ ಶರಣಾದ ಶಿವಮೊಗ್ಗದ ಜೈಲು ಸಿಬ್ಬಂದಿ! - ಹೆಂಡತಿಗೆ ವಿಡಿಯೋ ಕಾಲ್​ ಮಾಡಿ ನೇಣಿಗೆ ಶರಣಾದ ಕೇಂದ್ರ ಕಾರಾಗೃಹದ ವಾರ್ಡನ್

ಶಿವಮೊಗ್ಗ ಕಾರಾಗೃಹದ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಜೈಲು ಆವರಣದಲ್ಲಿರುವ ಕ್ವಾರ್ಟ್​ರ್ಸ್​​ನಲ್ಲಿ ಈ ಘಟನೆ ನಡೆದಿದೆ.

Prison guard committed suicide
ನೇಣಿಗೆ ಶರಣಾದ ಜೈಲು ಸಿಬ್ಬಂದಿ

By

Published : Nov 4, 2021, 4:09 PM IST

Updated : Nov 4, 2021, 4:55 PM IST

ಶಿವಮೊಗ್ಗ:ಹೆಂಡತಿಯೊಂದಿಗೆ ವಿಡಿಯೋ ಕಾಲ್​​​ನಲ್ಲಿ ಮಾತನಾಡುತ್ತಲೇ ಜೈಲು ಸಿಬ್ಬಂದಿಯೋರ್ವರು ನೇಣಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಕೇಂದ್ರ ಕಾರಾಗೃಹದ ವಾರ್ಡನ್ ಅಸ್ಪಾಕ್ ಟಗರಿ(24) ಮೃತ ವ್ಯಕ್ತಿ. ಈತ ಮೂಲತಃ ಬೆಳಗಾವಿ ಜಿಲ್ಲೆಯ ಹೊಸೂರು ಗ್ರಾಮದವರು. ಇವರು ಕಾರಾಗೃಹ ಇಲಾಖೆಗೆ ಸೇರ್ಪಡೆಯಾಗಿ ಮೂರು ವರ್ಷ ಕಳೆದಿದೆ. ಈ ಮೊದಲು ಇವರು ಕೆಎಸ್ಆರ್​​ಪಿಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಪರೀಕ್ಷೆ ಬರೆದು‌ ಕಾರಾಗೃಹ ಇಲಾಖೆಗೆ ಕರ್ತವ್ಯಕ್ಕೆ ಸೇರಿ ಸೇವೆ ಸಲ್ಲಿಸುತ್ತಿದ್ದರು.

ಹೆಂಡತಿಯೊಂದಿಗೆ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಲೇ ನೇಣಿಗೆ ಶರಣಾದ ಜೈಲು ಸಿಬ್ಬಂದಿ

ಕಳೆದ ವರ್ಷ ಡಿಸೆಂಬರ್​​ನಲ್ಲಿ ಅಸ್ಪಾಕ್​​​ ತಮ್ಮ ಪಕ್ಕದೂರಿನ ಯರನಾಳು ಗ್ರಾಮದ ರಾಜೇಸಾಬ್​ ಎಂಬುವರ ಮಗಳನ್ನು ವಿವಾಹವಾಗಿದ್ದರು. ಇವರಿಗೆ ಒಂದು ಹೆಣ್ಣು ಮಗು ಕೂಡ ಇದೆ.

ಹೆಂಡತಿಯೊಂದಿಗಿನ ಜಗಳದಿಂದ ನೇಣಿಗೆ ಶರಣಾದ್ರಾ ಅಸ್ಪಾಕ್?

ಅಸ್ಪಾಕ್​ಗೆ ಪತ್ನಿ 20 ದಿನಗಳ ಹಿಂದೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ 40 ದಿನಕ್ಕೆ ಗಂಡನ ಮನೆಗೆ ಬರುವ ಶಾಸ್ತ್ರ ಮಾಡುವ ಸಲುವಾಗಿ ಹೆಂಡತಿಯೊಂದಿಗೆ ಮಾತನಾಡುವಾಗ ಸಣ್ಣ ಜಗಳವಾಗಿದೆ. ನಂತರ ಹೆಂಡತಿಯೊಂದಿಗೆ ಮಾತನಾಡುತ್ತಲೇ ಅಸ್ಪಾಕ್​ ನೇಣಿಗೆ ಶರಣಾಗಿದ್ದಾರೆ. ಅಸ್ಪಾಕ್ ನೇಣಿಗೆ ಶರಣಾಗುತ್ತಿರುವ ವಿಡಿಯೋ ನೋಡುತ್ತಿದ್ದಂತೆಯೇ ಹೆಂಡತಿ ತನ್ನ ತಂದೆಗೆ ತೋರಿಸಿದ್ದಾರೆ. ತಕ್ಷಣ ಅವರು ಶಿವಮೊಗ್ಗದಲ್ಲಿನ ಅಸ್ಪಾಕ್ ಸ್ನೇಹಿತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಜೈಲು ಸಿಬ್ಬಂದಿ ಬಂದು ಮನೆ ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಅಸ್ಪಾಕ್ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಸ್ನೇಹಿತನ ಬರ್ತ್​​ ಡೇ ಪಾರ್ಟಿ ಮುಗಿಸಿ ಬಂದು ನೇಣಿಗೆ ಶರಣು:

ಅಸ್ಪಾಕ್ ನಿನ್ನೆ ಜೈಲಿನ ಕ್ವಾರ್ಟ್​ರ್ಸ್​​ನಲ್ಲಿ ನಡೆದ ಸ್ನೇಹಿತನ ಹುಟ್ಟುಹಬ್ಬದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಪಾರ್ಟಿ ಮುಗಿಸಿ ರೂಮ್​ಗೆ ಬಂದು ತನ್ನ ಹೆಂಡತಿಗೆ ವಿಡಿಯೋ ಕಾಲ್​ ಮಾಡಿದ್ದಾರೆ. ಬಳಿಕ ಮಾತನಾಡುತ್ತಲೇ ನೇಣಿಗೆ ಶರಣಾಗಿದ್ದಾರೆ.

ಬುದ್ಧಿವಂತನಾಗಿದ್ದ ಅಸ್ಪಾಕ್ ಕಷ್ಟದಿಂದಲೇ ಓದಿ ಜೈಲ್ ವಾರ್ಡನ್ ಆಗಿದ್ದರು. ತಮ್ಮ ಅಳಿಯನಿಗೆ ಅನಾರೋಗ್ಯ ಇತ್ತು. ಇದೇ ಕಾರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಸ್ಪಾಕ್ ಮಾವ ಹೇಳಿದ್ದಾರೆ. ಕಣ್ಣೆದುರೇ ನೇಣಿಗೆ ಶರಣಾದ ಪತಿಯ ಸಾವಿನಿಂದ ಅಸ್ಪಾಕ್ ಪತ್ನಿ ಆಘಾತಕ್ಕೊಳಗಾಗಿದ್ದಾರೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ಶವವನ್ನು ಸಂಬಂಧಿಕರು ಹೊಸೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಇದನ್ನು ಓದಿ: ಪೋಷಕರೇ ಎಚ್ಚರ!.. ಚಾಕೋಲೆಟ್ ಆಸೆ ತೋರಿಸಿ ಮಕ್ಕಳನ್ನು ಅಪಹರಿಸಲು ಯತ್ನ

Last Updated : Nov 4, 2021, 4:55 PM IST

ABOUT THE AUTHOR

...view details