ಶಿವಮೊಗ್ಗ:ತುಂಬು ಗರ್ಭಿಣಿಯಾಗಿದ್ರೂ ಕೂಡ ಶುಶ್ರೂಷಕಿ ರೂಪಾ ಅವರು ಕೊರೊನಾ ನಿಯಂತ್ರಣ ಸೇವೆಯಲ್ಲಿ ನಿರತವಾಗಿದ್ದ ಮಹಿಳೆಯ ಕೆಲಸಕ್ಕೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತುಂಬು ಗರ್ಭಿಣಿಯಾದ್ರು ಕೊರೊನಾ ವಾರಿಯರ್ಸ್ ಆಗಿ ಕೆಲಸ: ಅಧಿಕಾರಿಗಳಿಂದ ಶ್ಲಾಘನೆ - Pregnant Works as Corona Warriors
ತುಂಬು ಗರ್ಭಿಣಿಯಾದ್ರೂ ಕೊರೊನಾ ನಿಯಂತ್ರಣ ಸೇವೆಯಲ್ಲಿ ಕಾರ್ಯನಿರ್ವಹಿಸಿದ ಶುಶ್ರೂಷಕಿ ರೂಪಾ ಅವರ ಸೇವೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತುಂಬು ಗರ್ಭಿಣಿಯಾದ್ರು ಕೊರೊನಾ ವಾರಿಯರ್ಸ್ ಆಗಿ ಕೆಲಸ
ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಅರೆಕಾಲಿಕ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರೂಪಾ ಅವರ ಗಾಜನೂರಿನ ನಿವಾಸಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಶಿವನಂಜಪ್ಪ ಅವರೊಂದಿಗೆ ಭೇಟಿ ನೀಡಿ ಶುಭಾಶಯ ಕೋರಿದರು.