ಶಿವಮೊಗ್ಗ:ಸತೀಶ್ ಜಾರಕಿಹೊಳಿ ಅವರು ತಮ್ಮ ಅಜ್ಞಾನದಿಂದ ಹಿಂದೂ ಪದದ ಕುರಿತು ಬೇಡವಾದ ಹೇಳಿಕೆ ನೀಡಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸತೀಶ್ ಜಾರಕಿಹೊಳಿ ವಿರುದ್ದ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೇಳಿಕೆ ಖಂಡನೀಯವಾಗಿದೆ. ಹಿಂದೂ ಎಂಬ ಪದ ಜಗತ್ತಿನ ತುಂಬ ಹರಡಿದೆ. ಭಾರತದ ಮುಸ್ಲಿಮರು ಯಾವುದೇ ದೇಶಕ್ಕೆ ಹೋದರೆ ಹಿಂದೂ ಮುಸ್ಲಿಂ ಎಂದು ಕರೆಯುತ್ತಾರೆ. ಸತೀಶ್ ಜಾರಕಿಹೊಳಿ ಅವರು ಹಿಂದೂ ಶಬ್ದ ಅಶ್ಲೀಲ ಅಂತ ಯಾವ ಅರ್ಥದಲ್ಲಿ ಹೇಳಿದರು ಎಂಬುದು ನನಗೆ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಇಬ್ಬರು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ಇಡೀ ದೇಶದಲ್ಲಿ ಹಿಂದೂಗಳು ಇವರನ್ನು ತುಳಿಯುತ್ತಿದ್ದಾರೆ. ಮುಸ್ಲಿಮರ ವೋಟಿಗೋಸ್ಕರ ಹಿಂದೂಗಳಿಗೆ ಅವಹೇಳನ ಮಾಡುತ್ತಿರುವುದು ಅತ್ಯಂತ ನೀಚಕೆಲಸ ಎಂದು ಹೇಳಿದರು.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾತನಾಡಿದರು ಹಿಂದೂಗಳು ಎಂದರೆ, ಒಂದು ಜೀವನ ಕಲೆ ಎಂದು ಸುಪ್ರೀಂ ಕೋರ್ಟ್ ಹೇಳಿಕೆ ನೀಡಿದೆ. ಹಾಗಾದರೆ ಸುಪ್ರೀಂ ಕೋರ್ಟ್ ಮೂರ್ಖರೇ ಎಂದು ಪ್ರಶ್ನೆ ಮಾಡಿದರು. ಸುಮಾರು 400 ವರ್ಷಗಳ ಹಿಂದೆ ಹಿಂದೂ ಶಬ್ದದ ಉಲ್ಲೇಖ ಇದೆ. ಹಿಂದೂ ಧರ್ಮ ಒಡೆಯುವ, ಹಿಂದೂ ಧರ್ಮವನ್ನು ಕೆಟ್ಟದಾಗಿ ಬಿಂಬಿಸುವ ಜಾರಕಿಹೊಳಿ ಒಬ್ಬ ನಾಸ್ತಿಕ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ ಕ್ಷಮೆ ಕೇಳಬೇಕೆಂದರು.
ಮುಂದಿನ ಚುನಾವಣೆಯಲ್ಲಿ ಇದೇ ಹಿಂದೂ ಶಬ್ದ ಸತೀಶ್ ಜಾರಕಿಹೊಳಿಗೆ ಮಣ್ಣು ಮುಕ್ಕಿಸುತ್ತದೆ ಎಂಬ ಎಚ್ಚರಿಕೆ ನೀಡಿದರು. ಸತೀಶ್ ಜಾರಕಿಹೊಳಿ ಪ್ರತಿವರ್ಷ ಅಂಬೇಡ್ಕರ್ ನಿರ್ವಾಣ ದಿನವನ್ನು ಸ್ಮಶಾನದಲ್ಲಿ ಮಾಡುತ್ತಾರೆ. ಸ್ಮಶಾನದಲ್ಲಿ ಶುಭಕಾರ್ಯ ಮಾಡಿ ಹಿಂದೂ ವಿರೋಧಿ ನೀತಿ ಮಾಡಿ ತಮ್ಮ ಮಾನಸಿಕತೆಯನ್ನು ತೋರುತ್ತಿದ್ದಾರೆ ಎಂದರು.
ಯಾರನ್ನು ಮೆಚ್ಚಿಸಲು ಜಾರಕಿಹೊಳಿ ಈ ರೀತಿ ಮಾಡುತ್ತಿಲ್ಲ. ಅವರು ಪಕ್ಕ ಹಿಂದೂ ವಿರೋಧಿಯಾಗಿ ಈ ರೀತಿ ಮಾಡಿದ್ದಾರೆ. ರಾಮಾಯಣವನ್ನು ಬರೆದವರು ವಾಲ್ಮೀಕಿ ಜನಾಂಗದವರು. ಅಂತಹ ಜಾತಿಯಲ್ಲಿ ಹುಟ್ಟಿದ ಜಾರಕಿಹೊಳಿ ವಾಲ್ಮೀಕಿಗೆ ಅಪಮಾನ ಮಾಡುತ್ತಿದ್ದಾರೆ ಎಂದರು.
ಓದಿ:ಜಾರಕಿಹೊಳಿ ಹಿಂದೂ ಪದ ಬಳಕೆ ವೈಯಕ್ತಿಕ ವಿಚಾರ, ಕಾಂಗ್ರೆಸ್ಗೆ ಸಂಬಂಧಿಸಿದ್ದಲ್ಲ: ಡಿಕೆಶಿ