ಕರ್ನಾಟಕ

karnataka

ETV Bharat / state

ರಸ್ತೆ ಮಧ್ಯೆ ಹುತ್ತ ನಿರ್ಮಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ... ಯಾಕೆ ಗೊತ್ತಾ? - Latest Protest News In shimoga

ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ರಸ್ತೆ ಮಧೈ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ

By

Published : Nov 16, 2019, 4:21 PM IST

ಶಿವಮೊಗ್ಗ: ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ರಸ್ತೆ ಮಧ್ಯೆ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ
ನಗರದ ಜೈಲ್ ವೃತ್ತದಲ್ಲಿ ಗುಂಡಿಗಳನ್ನು ಮುಚ್ಚಿ ಮಣ್ಣಿನ ರಾಶಿ ಹಾಗೇ ಬಿಟ್ಟು ಹೋಗಿರುವುದನ್ನ ಗಮಿಸಿದ ವೆಂಕಟೇಶ್ ಎಂಬಾತ ಮಣ್ಣಿನ ರಾಶಿಯನ್ನು ಹುತ್ತದ ಹಾಗೆ ನಿರ್ಮಿಸಿ ಪ್ಲಾಸ್ಟಿಕ್ ಹಾವನ್ನು ಇಟ್ಟು ಹೂವಿನ ಹಾರ, ಕುಂಕುಮ ಹಾಕಿ ಪೂಜೆ ಮಾಡಿ 'ರಾಜಕೀಯದ ಕೊಡುಗೆ ಬದಲಾವಣೆಗಾಗಿ' ಎಂಬ ಫಲಕ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ABOUT THE AUTHOR

...view details