ಕರ್ನಾಟಕ

karnataka

ETV Bharat / state

ಶಿವಮೊಗ್ಗ ನೆಹರು ಕ್ರೀಡಾಂಗಣದ ಬಳಿ ಬಳಸಿದ ಪಿಪಿಇ ಕಿಟ್ ಬೇಕಾಬಿಟ್ಟಿ ಎಸೆತ! - ಶಿವಮೊಗ್ಗ ಜಿಲ್ಲಾ ಸುದ್ದಿ

ನೆಹರು ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಲ್ಲಾ ಸಶಸ್ತ್ರ ಪಡೆ ಪೊಲೀಸರ ನೇಮಕಾತಿ ನಡೆಸುತ್ತಿದೆ. ನೇಮಕಾತಿ ಸಿಬ್ಬಂದಿ ಕೊರೊನಾದಿಂದಾಗಿ ಅಭ್ಯರ್ಥಿಗಳ ಆಯ್ಕೆಯ ಪರೀಕ್ಷೆ ನಡೆಸಲು ಪಿಪಿಇ ಕಿಟ್ ಬಳಕೆ ಮಾಡಿದ್ದರು.

ppe kit thrown in shivamogga
ಪಿಪಿಇ ಕಿಟ್

By

Published : Jul 4, 2020, 3:10 AM IST

ಶಿವಮೊಗ್ಗ: ಜಿಲ್ಲಾ ಸಶಸ್ತ್ರ ಪಡೆ ಸಿಬ್ಬಂದಿ ಧರಿಸಿದ್ದ ಪಿಪಿಇ ಕಿಟ್​ಗಳನ್ನು ನಗರದ ನೆಹರು ಕ್ರೀಡಾಂಗಣದ ಬಳಿ ಬೇಕಾಬಿಟ್ಟಿ ಬಿಸಾಡಲಾಗಿದ್ದು, ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಹರು ಕ್ರೀಡಾಂಗಣದಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಲ್ಲಾ ಸಶಸ್ತ್ರ ಪಡೆ ಪೊಲೀಸರ ನೇಮಕಾತಿ ನಡೆಸುತ್ತಿದೆ. ನೇಮಕಾತಿ ಸಿಬ್ಬಂದಿ ಕೊರೊನಾದಿಂದಾಗಿ ಅಭ್ಯರ್ಥಿಗಳ ಆಯ್ಕೆಯ ಪರೀಕ್ಷೆ ನಡೆಸಲು ಪಿಪಿಇ ಕಿಟ್ ಬಳಕೆ ಮಾಡಿದ್ದರು.

ಕಿಟ್​​ಗಳ ಬಳಕೆಯ ನಂತರ ಸರಿಯಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಲ್ಲದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details