ಕರ್ನಾಟಕ

karnataka

ETV Bharat / state

ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ‌ಪಾಲಿಟಿಕ್ಸ್​: ಮಾಜಿ ಸಚಿವ ಕಿಮ್ಮನೆ ರತ್ನಾಕರ್- ಮಂಜುನಾಥ ಗೌಡರ ನಡುವೆ ಕಲಹ - ತೀರ್ಥಹಳ್ಳಿ

ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ‌ ಎರಡು ಗುಂಪು ನಿರ್ಮಾಣವಾಗಿದ್ದು, ಮಂಜುನಾಥ ಗೌಡರ ಪಾದಯಾತ್ರೆ ವಿರುದ್ಧ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಸಮಾಧಾನ ಹೊರ ಹಾಕಿ ಪತ್ರ ಬರೆದ್ದಿದ್ದಾರೆ.

political fight
ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ‌ ಗುಂಪು ರಾಜಕೀಯ

By

Published : Jul 26, 2022, 4:03 PM IST

ಶಿವಮೊಗ್ಗ: ತೀರ್ಥಹಳ್ಳಿ ಕಾಂಗ್ರೆಸ್​ನಲ್ಲಿ ಚುನಾವಣೆಗೂ ಮುನ್ನಾ ಟಿಕೆಟ್ ರಾಜಕೀಯ ಜೋರಾಗಿ ಪ್ರಾರಂಭಗೊಂಡಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್​ ಅವರು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥಗೌಡ ಅವರ ವಿರುದ್ಧ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕಿಮ್ಮನೆ ರತ್ನಾಕರ್ ಅವರು ಮಂಜುನಾಥ್ ಗೌಡರಿಗೆ ಬರೆದ ಪತ್ರದಲ್ಲಿ ಮಂಜುನಾಥ ಗೌಡರು ಜುಲೈ 28 ರಂದು ನಡೆಸಲಿರುವ ಪಾದಯಾತ್ರೆಯ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಪತ್ರದ ಸಾರಾಂಶ:ಆರ್.ಎಂ.ಮಂಜುನಾಥ ಗೌಡರವರೆ ನೀವು ಮಾಜಿ ಸಿಎಂ ಕಡಿದಾಳು ಮಂಜಪ್ಪನವರ ಸಮಾಧಿಯಿಂದ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ನಿಮ್ಮ ಖಾಸಗಿ ಪಾದಯಾತ್ರೆ ಬಗೆಗೆ ನಿಮ್ಮ ಪತ್ರ ಹಾಗೂ ಕರಪತ್ರ ಬಂದಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಆಗಸ್ಟ್ 1 ರಿಂದ ಆಗಸ್ಟ್ 10 ರ ಒಳಗೆ ಪ್ರತಿ ವಿಧಾನಸಭ ಕ್ಷೇತ್ರದಲ್ಲಿ 15 ಕಿ.ಮಿ ದೂರ ಪಾದಯಾತ್ರೆ ಮಾಡುವಂತೆ ಆದೇಶ ನೀಡಿದ್ದಾರೆ.

ಅದರಂತೆ ತೀರ್ಥಹಳ್ಳಿ ವಿಧಾನಸಭ ಕ್ಷೇತ್ರದಲ್ಲಿ ಆಗಸ್ಟ್ 8 ರಂದು ಮೇಗರವಳ್ಳಿಯಿಂದ ತೀರ್ಥಹಳ್ಳಿವರೆಗೂ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಆಸರೆ ನೀವು ಜುಲೈ 27 ರಂದು ಪಾದಯಾತ್ರೆ ನಡೆಸುತ್ತಿದ್ದೀರಿ. ಈ ಪಾದಯಾತ್ರೆಯ ಕರಪತ್ರ ಸೇರಿದಂತೆ ಬ್ಯಾನರ್​ಗಳಲ್ಲಿ ಪಕ್ಷ ಚಿಹ್ನೆ, ಮುಖಂಡರ ಭಾವಚಿತ್ರಗಳಲ್ಲಿ. ನೀವು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಕೆಪಿಸಿಸಿ ಹಾಗೂ ಜಿಲ್ಲಾಧ್ಯಕ್ಷರಿಂದ ಯಾವುದೇ ಆದೇಶ ಬಂದಿಲ್ಲ.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮತ್ತು ಮಂಜುನಾಥ ಗೌಡರ ನಡುವೆ ಪತ್ರ ಕಲಹ

ನಮ್ಮ ಪಕ್ಷದ ಅಧ್ಯಕ್ಷರು ಪಕ್ಷದಲ್ಲಿ ವ್ಯಕ್ತಿ ಪೂಜೆ ಮಾಡದೇ, ಪಕ್ಷದ ಪೂಜೆ ಮಾಡಿ ಎಂದು ಹಿಂದೆಯೇ ಹೇಳಿದ್ದಾರೆ. ಆದರೆ, ನೀವು ವ್ಯಕ್ತಿ ಪೂಜೆ ಮಾಡುತ್ತಾ ಪಾದಯಾತ್ರೆ ನಡೆಸುತ್ತಿದ್ದಿರಿ, ದಯವಿಟ್ಟು ಪಾದಯಾತ್ರ ಕೈ ಬಿಟ್ಟು ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆಯನ್ನು ಮಾಡಬೇಡಿ ಎಂದು ವಿನಂತಿಸಿ ಕೊಂಡಿದ್ದಾರೆ. ಅಲ್ಲದೆ ನೀವು ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಪಕ್ಷ ಸೇರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೀರಿ, ನೀವು ಎಲ್ಲೆ ಹೋದರೂ ಹಣದ ಜೊತೆ ಹೋಗಿ ಅಲ್ಲಿ ಅಗ್ರಸ್ಥಾನ ಪಡೆಯಬೇಕು ಎಂಬ ಬಯಕೆ ವ್ಯಕ್ತಪಡಿಸುತ್ತೀರಿ.

ಕಳೆದ 20 - 30 ವರ್ಷಗಳಿಂದ ಪಕ್ಷದಲ್ಲಿ ದುಡಿದವರು ಇದ್ದಾರೆ. ಅವರು ಸಹ ಟಿಕೆಟ್ ಆಕಾಂಕ್ಷಿಗಳೇ ಆಗಿದ್ದಾರೆ. ಪಕ್ಷ ಬಿಡುವ ಯೋಚನೆ ಇದ್ದರೆ ಈಗಲೇ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ ಇದು ನಿಮಗೂ ಪಕ್ಷಕ್ಕೂ ಒಳ್ಳೆಯದು, ಜುಲೈ 28 ರಂದು ಮಂಜುನಾಥ ಗೌಡ ಪಾದಯಾತ್ರೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಕಿಮ್ಮನೆ ರತ್ನಾಕರ್​ರವರ ಪತ್ರಕ್ಕೆ ಮಂಜುನಾಥ ಗೌಡ ಅವರು ಸಹ ಆಕ್ರೋಶ ಹೊರ ಹಾಕಿದ್ದಾರೆ. ನಾನು ಪಾದಯಾತ್ರೆ ಹಮ್ಮಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಆದೇಶದ ಮೇರೆಗೆ, ಇಲ್ಲಿ ಕೇವಲ ತ್ರಿವರ್ಣ ಧ್ವಜದೊಂದಿಗೆ ಪಾದಯಾತ್ರೆ ನಡೆಯುತ್ತಿದೆ. ಇಲ್ಲಿ ಯಾವುದೇ ಪಕ್ಷದ ಮುಖಂಡರ ಭಾವಚಿತ್ರವನ್ನು ಹಾಕಬಾರದು ಎಂದು ಯಾರದ್ದೇ ಫೋಟೋವನ್ನು ಹಾಕಿಲ್ಲ. ನಾನು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್​ಗೆ ಮಂಜುನಾಥ್ ಗೌಡರವರು ಸೇರ್ಪಡೆಯಾದಾಗಿನಿಂದ ತೀರ್ಥಹಳ್ಳಿಯಲ್ಲಿ ಎರಡು ಗುಂಪು‌ ಸೃಷ್ಟಿಯಾಗಿದೆ. ಈ ಕುರಿತು ಜಿಲ್ಲಾ‌ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷರ ಮೇಲೆ‌ ಭಾರಹಾಕಿ ಸುಮ್ಮನಾಗಿದ್ದಾರೆ.‌

ಇದನ್ನೂ ಓದಿ :ಆರ್​ಟಿಓ ದಂಡ ವಸೂಲಿ ಆರೋಪ.. ಸಾರಿಗೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಲಕ್ಷ್ಮೀ ಹೆಬ್ಬಾಳ್ಕರ್

ABOUT THE AUTHOR

...view details