ಶಿವಮೊಗ್ಗ:ಕೊರೊನಾ ನಿಯಂತ್ರಿಸಲು ಎಲ್ಲೆಡೆ ಲಾಕ್ಡೌನ್ ಮಾಡಲಾಗಿದ್ದು, ಜನರಿಗೆ ಮನೆಗಳಿಂದ ಹೊರಬರದಂತೆ ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದವರಿಗೆ ಡಿಸಿ ಹಾಗೂ ಎಸ್ಪಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ನಡುವೆ ಶಟಲ್ ಆಡುತ್ತಿದ್ದವರಿಗೆ ಶಿವಮೊಗ್ಗ ಎಸ್ಪಿ, ಡಿಸಿಯಿಂದ ಫುಲ್ ಕ್ಲಾಸ್ - ಶಿವಮೊಗ್ಗ ಲೇಟೆಸ್ಟ್ ನ್ಯೂಸ್
ಇಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಇಂದು ನಗರ ಸಂಚಾರ ಕೈಗೊಂಡಿದ್ದರು. ಈ ವೇಳೆ ರವೀಂದ್ರ ನಗರದ ಬಳಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದವರಿಗೆ ಡಿಸಿ ಹಾಗೂ ಎಸ್ಪಿ ಫುಲ್ ಕ್ಲಾಸ್ ತೆಗೆದುಕೊಂಡರು.

ಲಾಕ್ಡೌನ್ನಲ್ಲಿ ನಡುವೆ ಶಟಲ್ ಆಟ ಆಡುತ್ತಿದ್ದವರಿಗೆ ಫುಲ್ಕ್ಲಾಸ್ ತೆಗೆದುಕೊಂಡ ಡಿಸಿ,ಎಸ್ಪಿ
ಲಾಕ್ಡೌನ್ನಲ್ಲಿ ನಡುವೆ ಶಟಲ್ ಆಟ ಆಡುತ್ತಿದ್ದವರಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಡಿಸಿ, ಎಸ್ಪಿ
ಇಂದು ಜಿಲ್ಲಾಧಿಕಾರಿ ಶಿವಕುಮಾರ್ ಹಾಗೂ ಎಸ್ಪಿ ಶಾಂತರಾಜು ಅವರು ನಗರದ ಸಂಚಾರ ನಡೆಸಿದರು. ಈ ವೇಳೆ ರವೀಂದ್ರ ನಗರದ ಸರ್ಕಾರಿ ಶಾಲೆ ಪಕ್ಕದ ಖಾಲಿ ಜಾಗದಲ್ಲಿ ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಟವಾಡುತ್ತಿದ್ದವರಲ್ಲಿ ಇಬ್ಬರು ಟೆಕ್ಕಿಗಳು ಎಂದು ತಿಳಿದು ಬಂದಿದೆ.
ಲಾಕ್ಡೌನ್ನಲ್ಲಿ ಮನೆಯಲ್ಲಿದ್ದು ಸಹಕರಿಸಿ ಎಂದು ಪ್ರಧಾನಮಂತ್ರಿ ಹಾಗೂ ಸಿಎಂ ಹೇಳುತ್ತಿದ್ದಾರೆ. ಅವರ ಮಾತಿಗೂ ಬೆಲೆ ಕೊಡದೆ ಹೀಗೆ ಬೀದಿಗೆ ಬಂದು ಆಟ ಆಡುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು. ಬಳಿಕ ಶಟಲ್ ಬ್ಯಾಡ್ಮಿಂಟನ್ ಮತ್ತು ನೆಟ್ಅನ್ನು ವಶಪಡಿಕೊಳ್ಳಲಾಗಿದೆ.