ಶಿವಮೊಗ್ಗ:ತಂದೆ-ತಾಯಿ ಜೊತೆ ಜಗಳವಾಡಿ ಮನೆ ಬಿಟ್ಟು ಹೊಳೆ ಹಾರಲು ಹೋದ ಯುವತಿಯ ಮನವೊಲಿಸಿ ಪೊಲೀಸರು ಮನೆಗೆ ತಲುಪಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ರಾತ್ರೋರಾತ್ರಿ ಸಾಯಲು ಹೊರಟಿದ್ದ ಯುವತಿ... ಪೊಲೀಸರಿಂದ ರಕ್ಷಣೆ - ಶಿವಮೊಗ್ಗ ಕ್ರೈಮ್ ನ್ಯೂಸ್
ಹೊಳೆ ಹಾರಲು ಹೋದ ಯುವತಿಯನ್ನು ಪೊಲೀಸರು ರಕ್ಷಿಸಿ ಮನೆಗೆ ಕಳುಹಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Shimoga
ಹನುಮಂತ ನಗರದ 24 ವರ್ಷದ ಯುವತಿ ಮನೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಮನೆ ಬಿಟ್ಟು ಸಾಯುವುದಾಗಿ ಹೇಳಿ ಮನೆಯಿಂದ ರಾತ್ರಿ 1 ಗಂಟೆಗೆ ಹೊರ ಬಂದಿದ್ದಳು.
ಈ ಕುರಿತಂತೆ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದರು. ತಕ್ಷಣ ಪೊಲೀಸರು ಹುಡುಕಾಟ ನಡೆಸಿದಾಗ ಯುವತಿ ಹೊಳೆ ಬಳಿ ಕೋಟೆ ಪೊಲೀಸರಿಗೆ ಸಿಕ್ಕಿದ್ದಾಳೆ. ನಂತರ ಯುವತಿಯನ್ನು ಜಯನಗರ ಪೊಲೀಸ್ ಠಾಣೆಗೆ ಕರೆಯಿಸಿ ಪೋಷಕರ ಜೊತೆ ಕಳುಹಿಸಿದ್ದಾರೆ.