ಕರ್ನಾಟಕ

karnataka

ETV Bharat / state

ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ: ಗುಂಪು ಚದುರಿಸಲು ಲಘು ಲಾಠಿಚಾರ್ಜ್​​ - Police lathi lash

ಭಾವೈಕ್ಯತೆ ಕೇಂದ್ರದ ಪಕ್ಕದ ಅರಣ್ಯದಲ್ಲಿ ಅಡುಗೆ ಮಾಡಿ ಊಟ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಕೇಂದ್ರದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಇದರಿಂದ ಊಟ ತಯಾರು ಮಾಡುವ ಹಾಗೂ ಊಟ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಪಂಚಾಯತಿಯ ಸಭೆಯಲ್ಲಿ ತಿಳಿಸಲಾಗಿತ್ತು.

police-lathicharged-people-in-hangere
ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ: ಗುಂಪು ಚದುರಿಸಲು ಲಘು ಲಾಠಿಚಾರ್ಜ್​​

By

Published : Sep 9, 2020, 6:30 PM IST

ಶಿವಮೊಗ್ಗ:ಜಿಲ್ಲೆಯ ಭಾವೈಕ್ಯತೆಯ ಕೇಂದ್ರ ಅಂತಲೇ ಕರೆಯಲಾಗುತ್ತಿದ್ದ ಹಣಗೆರೆಯಲ್ಲಿ ಸ್ವಚ್ಛತೆ ವಿಚಾರವಾಗಿ ಎರಡು ಗುಂಪಿನ ನಡುವೆ ನಡೆದು ವಾಗ್ವಾದ ವಿಕೋಪಕ್ಕೆ ಹೋಗಿ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿರುವ ಘಟನೆ ನಡೆದಿದೆ.

ಹಣಗೆರೆಯು ಭಾವೈಕ್ಯತೆಯ ಕೇಂದ್ರವಾಗಿದ್ದು, ಇಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಒಂದೇ ಕಡೆ ಆಗಮಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಸ್ವಚ್ಛತೆ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ

ಭಾವೈಕ್ಯತೆ ಕೇಂದ್ರದ ಪಕ್ಕದ ಅರಣ್ಯದಲ್ಲಿ ಅಡುಗೆ ಮಾಡಿ ಊಟ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಕೇಂದ್ರದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಇದರಿಂದ ಊಟ ತಯಾರು ಮಾಡುವ ಹಾಗೂ ಊಟ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ಪಂಚಾಯತಿಯ ಸಭೆಯಲ್ಲಿ ತಿಳಿಸಲಾಗಿತ್ತು.

ಇದಕ್ಕೆ ಸ್ಥಳಿಯ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದಾಗ ಎರಡು ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಇದು ವಿಕೋಪಕ್ಕೆ ಹೋದಾಗ ಮಾಳೂರು ಪೊಲೀಸರು ಗುಂಪು ಚದುರಿಸಲು ಲಘು ಲಾಠಿಪ್ರಹಾರ ನಡೆಸಿದರು. ಭಾವೈಕ್ಯತೆ ಕೇಂದ್ರದ ಸುತ್ತ ಸ್ವಚ್ಚವಾಗಿಡುವ ಯತ್ನಕ್ಕೆ ಸ್ಥಳಿಯರೆ ವಿರೋಧ ಮಾಡುವುದು ನಿಜಕ್ಕೂ ದುರಂತ. ಸಭೆಯಲ್ಲಿ ತೀರ್ಥಹಳ್ಳಿ ತಾ.ಪಂ ಇ.ಓ, ಪಂಚಾಯತಿ ಅಧಿಕಾರಿಗಳು ಸೇರಿ ಇತರರು ಹಾಜರಿದ್ದರು.

ABOUT THE AUTHOR

...view details