ಶಿವಮೊಗ್ಗ: ಆಹಾರ ವಸ್ತುಗಳನ್ನು ಖರೀದಿಸಲಾಗದೆ ಪರದಾಡುತ್ತಿದ್ದ70 ವರ್ಷದ ವೃದ್ಧ ದಂಪತಿಗೆ ಪೊಲೀಸರು ದಿನಸಿ ವಸ್ತುಗಳನ್ನು ನೀಡಿ ಸಂಕಷ್ಟಕ್ಕೆ ನೆರವಾದರು.
ಶಿವಮೊಗ್ಗ ಮಲವಗೊಪ್ಪ ಶುಗರ್ ಫ್ಯಾಕ್ಟರಿ ಕ್ವಾಟ್ರಸ್ನಲ್ಲಿ ಈ ದಂಪತಿ ವಾಸವಾಗಿದ್ದಾರೆ. ಇವರ ಸಂಬಂಧಿಕರೊಬ್ಬರು ಮೃತಪಟ್ಟಿರುವ ಕಾರಣ ಮನೆಯವರೆಲ್ಲರೂ ತಮಿಳುನಾಡಿಗೆ ಹೋಗಿ ಲಾಕ್ಡೌನ್ನಲ್ಲಿ ಸಿಲುಕಿದ್ದಾರೆ. ಹೀಗಾಗಿ ಇವರ ಸಂಕಷ್ಟ ತಿಳಿದ ಪೊಲೀಸ ವರಿಷ್ಠಾಧಿಕಾರಿ ಶಿವಮೊಗ್ಗ ಗ್ರಾಮಾಂತರ ಪಿಎಸ್ಐಗೆ ಸಹಾಯ ಮಾಡಲು ಸೂಚಿಸಿದ್ದರು.