ಕರ್ನಾಟಕ

karnataka

ETV Bharat / state

ಶಿಕಾರಿಪುರ ನೀರಾವರಿ ನಿಗಮಕ್ಕೆ ವಂಚನೆ ಆರೋಪ: ಸಿಬ್ಬಂದಿ ಅಂದರ್​ - ಶಿವಮೊಗ್ಗ ಸುದ್ದಿ

ಶಿಕಾರಿಪುರ ನೀರಾವರಿ ನಿಗಮದ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ಮೌಲ್ಯದ ಎಲೆಕ್ಟ್ರಾನಿಕ್ ಯಂತ್ರೋಪಕರಣಳನ್ನು ಕೊಂಡು ವಂಚನೆ ಎಸಗಿದ್ದ ಆರೋಪ ಪ್ರಕರಣದಲ್ಲಿ ಸಿಬ್ಬಂದಿಯನ್ನು ಬಂಧಿಸಲಾಗಿದೆ. ನಿಗಮದ ಸಿಬ್ಬಂದಿಯೇ ವಂಚನೆಯಲ್ಲಿ ತೊಡಗಿರುವುದು ತನಿಖೆ ವೇಳೆ ದೃಢಪಟ್ಟಿದೆ ಎನ್ನಲಾಗ್ತಿದೆ. ಈ ಹಿನ್ನೆಲೆ ನಾಗೇಶ್ ಎಂಬಾತನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

Police arrested a man in case of fraud to an irrigation corporation
ಸಿಬ್ಬಂದಿಯನ್ನು ಬಂಧಿಸಿದ ಪೊಲೀಸರು

By

Published : Nov 26, 2020, 7:49 AM IST

ಶಿವಮೊಗ್ಗ: ಎಲೆಕ್ಟ್ರಾನಿಕ್ ಅಂಗಡಿಗೆ ನಕಲಿ ದಾಖಲೆ ನೀಡಿ ಲಕ್ಷಾಂತರ ರೂಪಾಯಿ ವಂಚನೆ ಆರೋಪದಡಿ ಶಿಕಾರಿಪುರ ನೀರಾವರಿ ನಿಗಮದ ಸಿಬ್ಬಂದಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಶಿಕಾರಿಪುರ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಛೇರಿ ಉದ್ಯೋಗಿ ಯುಟಿಪಿ ಕಾಲೋನಿ ನಿವಾಸಿ ನಾಗೇಶ್(50) ನನ್ನು ಬಂಧಿಸಲಾಗಿದೆ. ಈತ ನಕಲಿ ದಾಖಲೆಗಳನ್ನು ನೀಡಿ, ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜೀಸ್ ಮತ್ತು ವೆಂಕಟೇಶ ನಗರದ ಹೈಟೆಕ್ ಸೆಲ್ಯೂಷನ್ ಎಂಬ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮಾರಾಟ ಮಾಡುವ ಅಂಗಡಿಗಳಿಂದ, ಉಪಕರಣಗಳನ್ನು ಕೊಂಡು ವಂಚನೆ ಎಸಗಿರುವ ಬಗ್ಗೆ‌ ಜಯನಗರ ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಲಾಗಿತ್ತು.

ಇವರಿಂದ 4.15 ಲಕ್ಷ ರೂ ಮೌಲ್ಯದ 02 ಜೆರಾಕ್ಸ್ ಮಷಿನ್, 05 ಪ್ರಿಂಟರ್, 02 ಯುಪಿಎಸ್ ಹಾಗೂ 06 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಾಗಿದೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಉಮೇಶ್ ಈಶ್ವರ್ ನಾಯಕ್, ಡಿವೈಎಸ್​​​ಪಿ ಶಿವಮೊಗ್ಗ ಉಪ ವಿಭಾಗ ಅವರ ಮಾರ್ಗದರ್ಶನದಲ್ಲಿ, ಚಂದ್ರಶೇಖರ್, ಸಿಪಿಐ ಕೋಟೆ ಅವರ ನೇತೃತ್ವದಲ್ಲಿನ ತಂಡವು ಕಾರ್ಯಾಚರಣೆ ನಡೆಸಿತ್ತು. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್​​​ಪಿ ಕೆ.ಎಂ ಶಾಂತರಾಜು ತಿಳಿಸಿದ್ದಾರೆ.

ABOUT THE AUTHOR

...view details