ಕರ್ನಾಟಕ

karnataka

ETV Bharat / state

ಓಮಿನಿ ಕಾರಲ್ಲಿ‌ ಗಾಂಜಾ ಸಾಗಾಟ : 6 ಕೆ.ಜಿ ಗಾಂಜಾ ವಶಕ್ಕೆ, 8 ಆರೋಪಿಗಳ ಸೆರೆ - Shimoga crime latest news

ಗಾಂಜಾ ಮಾರಾಟ ಎಲ್ಲೆಡೆ ಸದ್ದು ಮಾಡುತ್ತಿದ್ದು, ಇಂದು ಭದ್ರಾವತಿಯ ಹಳೆನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಓಮಿನಿ ಕಾರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.

Shimoga
Shimoga

By

Published : Sep 7, 2020, 6:11 PM IST

ಶಿವಮೊಗ್ಗ:ಓಮಿನಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುವ ವೇಳೆ ಭದ್ರಾವತಿಯ ಹಳೆನಗರ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯ್‌ಕುಮಾರ್(19), ಕಿರಣ್(22), ಚಂದನ್(18), ಕಿರಣ್(28), ಮಂಜುನಾಥ್(27) ಪವನ್ ನಾಯಕ್(18) ,ಲಿಖಿತ್(21), ಚಲುವ(23)ಬಂಧಿತ ಆರೋಪಿಗಳು.

ಇವರು ಭದ್ರಾವತಿ ಬಿ.ಹೆಚ್.ರಸ್ತೆಯ ನ್ಯೂ ಸ್ಟಾರ್ ಇಂಜಿನಿಯರಿಂಗ್ ವರ್ಕ್ಸ್ ಬಳಿ ಓಮಿನಿ ಕಾರಿನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಆರೋಪಿಗಳನ್ನು ಬಂಧಿಸಿ 2 ಲಕ್ಷ ಮೌಲ್ಯದ ಸುಮಾರು 6 ಕೆ.ಜಿ 400 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರೆಲ್ಲ ಭದ್ರಾವತಿಯ ನಿವಾಸಿಗಳಾಗಿದ್ದು, ಇವರ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details