ಕರ್ನಾಟಕ

karnataka

ETV Bharat / state

ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತಕಾಮಿಯನ್ನು ಥಳಿಸಿ ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು - ಮಾರಶೆಟ್ಟಿಹಳ್ಳಿ ಲೆಟೆಸ್ಟ್ ನ್ಯೂಸ್​

ಮಹಿಳೆಯರ ಉಳ ಉಡುಪು ಕದಿಯುತ್ತಿದ್ದ ಯುವಕನನ್ನು ಗ್ರಾಮಸ್ಥರೇ ಥಳಿಸಿ ಪೊಲೀಸರಿಗೊಪ್ಪಿಸುರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ
Shimoga

By

Published : Nov 30, 2019, 11:13 AM IST

Updated : Nov 30, 2019, 12:01 PM IST

ಶಿವಮೊಗ್ಗ:ಮಹಿಳೆಯರ ಉಳ ಉಡುಪು ಕದಿಯುತ್ತಿದ್ದ ಯುವಕನನ್ನುಗ್ರಾಮಸ್ಥರೇ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಹಿಳೆಯರ ಒಳ ಉಡುಪು ಕದಿಯುವ ಸೈಕೋ

ಗ್ರಾಮದ ಸತೀಶ್ ಎಂಬ ಶಿಕ್ಷಕರ ಮನೆಯಲ್ಲಿ ಒಣಹಾಕಿದ್ದ ವೇಳೆ ಅಲ್ಲಿಗೆ ಬಂದ ಯುವಕಮಹಿಳೆಯರ ಒಳಉಡುಪನ್ನು ಮಾತ್ರ ಕದ್ದಿದ್ದಾನೆ. ಈ ರೀತಿ ಪ್ರತಿದಿನ ಈತ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದನು. ಇದನ್ನು ಕಂಡು ಹಿಡಿಯಲೆಂದು ಶಿಕ್ಷಕ ಸತೀಶ್‌ ತಮ್ಮ ಮನೆಗೆ ಸಿಸಿ ಕ್ಯಾಮೆರಾ ಹಾಕಿಸಿದ್ದರು. ಈತ ಬಟ್ಟೆ ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶಿಕ್ಷಕ ಸತೀಶ್​ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಒಳ ಉಡುಪು ಕದಿಯುತ್ತಿದ್ದ ಯುವಕ ಅದೇ ಗ್ರಾಮದ ಮನು ಕುಮಾರ್ ಎಂದು ಪತ್ತೆ ಹಚ್ಚಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಆತನನ್ನು ವಿಚಾರಿಸಿದರೆ ನಾನು ಯಾವುದೇ ಒಳ ಉಡುಪು ಕದ್ದಿಲ್ಲ ಎಂದು ವಾದಿಸಿದ್ದಾನೆ. ನಂತರ ಆತನಿಗೆ ಸಿಸಿ ಕ್ಯಾಮೆರಾ ತೋರಿಸಿದಾಗ ಬೇರೆ ದಾರಿ ಕಾಣದೇ ಒಪ್ಪಿಕೊಂಡಿದ್ದಾನೆ.ನಂತರ ಗ್ರಾಮಸ್ಥರೇ ಆತನ ಮೇಲೆ ಹಲ್ಲೆ ನಡೆಸಿ ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ.

ಘಟನೆ ಬಳಿಕ ಮನು ಕುಮಾರ್ ಸ್ನೇಹಿತರು ಶಿಕ್ಷಕ ಸತೀಶ್ ಅವರ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ಸತೀಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Nov 30, 2019, 12:01 PM IST

ABOUT THE AUTHOR

...view details