ಕರ್ನಾಟಕ

karnataka

ETV Bharat / state

ಹೆಲ್ಮೆಟ್ ಧರಿಸದವರ ವಿರುದ್ಧ ಕಾರ್ಯಾಚರಣೆ: ನಾಲ್ಕೇ ದಿನದಲ್ಲಿ 1.90 ಲಕ್ಷ ರೂ ದಂಡ ಸಂಗ್ರಹ - Police action against those who do not wear helmets

ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಕೇವಲ ನಾಲ್ಕು ದಿನದಲ್ಲಿ 1 ಲಕ್ಷದ 90,000 ರೂ ದಂಡ ಶುಲ್ಕ ಸಂಗ್ರಹ ಮಾಡಿದ್ದಾರೆ.

ಹೆಲ್ಮೆಟ್ ಧರಿಸದೆ ಇರುವವರ ವಿರುದ್ಧ ಪೊಲೀಸರ ಕಾರ್ಯಾಚರಣೆ..ನಾಲ್ಕೆ ದಿನದಲ್ಲಿ 1.90 ಲಕ್ಷ ದಂಡ ಸಂಗ್ರಹ

By

Published : Oct 18, 2019, 8:23 AM IST

ಶಿವಮೊಗ್ಗ: ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವವರ ವಿರುದ್ಧ ಜಿಲ್ಲಾ ಪೊಲೀಸ್ ಕಠಿಣ ಕ್ರಮ ತೆಗೆದುಕೊಂಡಿದ್ದು, ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಕೇವಲ ನಾಲ್ಕು ದಿನದಲ್ಲಿ 1 ಲಕ್ಷದ 90,000 ದಂಡ ಶುಲ್ಕ ಸಂಗ್ರಹಿಸಿದ್ದಾರೆ.

ಸಂಚಾರಿ ಪೊಲೀಸರು ಅಕ್ಟೋಬರ್​ 14 ರಿಂದ 17ರವರೆಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.

ಕಳೆದ ವಾರ ಜಿಲ್ಲಾ ಪೊಲೀಸರು ಹೆಲ್ಮೆಟ್ ಕುರಿತು ಶಿವಮೊಗ್ಗ ಹಾಗೂ ಭದ್ರಾವತಿಯಲ್ಲಿ ವಿಶೇಷ ಜಾಗೃತಿ ಜಾಥಾ ನಡೆಸಿದ್ದರು. ಹೀಗಿದ್ದರೂ ಕೂಡ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details