ಕರ್ನಾಟಕ

karnataka

ETV Bharat / state

ಫೆಬ್ರವರಿಯಲ್ಲಿ ಪ್ರಧಾನಿಯಿಂದ ಶಿವಮೊಗ್ಗ ಏರ್​​ಪೋರ್ಟ್ ಲೋಕಾರ್ಪಣೆ: ಬಿಎಸ್​ವೈ - Shivamogga airport

ಶಿವಮೊಗ್ಗ ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳು ಜನವರಿ ತಿಂಗಳಾಂತ್ಯಕ್ಕೆ ಪೂರ್ಣಗೊಂಡು ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗಲಿದೆ- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ.

BS Yediyurappa
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ

By

Published : Nov 27, 2022, 8:23 AM IST

ಶಿವಮೊಗ್ಗ: ವಿಮಾನ ನಿಲ್ದಾಣದ ಕಾಮಗಾರಿ ಪ್ರಾರಂಭವಾಗಿ 2 ವರ್ಷವಾಗುತ್ತಿದೆ. ಎಲ್ಲ ಕೆಲಸಗಳು ಜನವರಿ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿವೆ. ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ಏರ್​​ಪೋರ್ಟ್ ಲೋಕಾರ್ಪಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಫೆಬ್ರವರಿಯಲ್ಲಿ ಮೋದಿಯಿಂದ ಶಿವಮೊಗ್ಗ ಏರ್​​ಪೋರ್ಟ್ ಲೋಕಾರ್ಪಣೆ: ಬಿಎಸ್​ವೈ

ಶಿವಮೊಗ್ಗ ತಾಲೂಕು ಸೋಗಾನೆಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಬಿಎಸ್​ವೈ ಕಾಮಗಾರಿ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬೆಂಗಳೂರು ಬಿಟ್ಟರೆ ಶಿವಮೊಗ್ಗ ವಿಮಾನ ನಿಲ್ದಾಣ ಅತಿ ದೊಡ್ಡ ರನ್ ವೇ ಹೊಂದಲಿದೆ. ರನ್ ವೇ ಕಾಮಗಾರಿ ಅಂತಿಮ ಹಂತದಲ್ಲಿದೆ. 3,110 ಮೀಟರ್ ಉದ್ದ, ಅಗಲ 45 ಮೀಟರ್ ಹೊಂದಿದೆ. ಪೆರಿಫೆರಲ್ ರಸ್ತೆ ಪೂರ್ಣವಾಗಿದೆ. ಎಫ್ರಾನ್, ಟರ್ಮಿನಲ್ ಹಾಗೂ ಎಟಿಸಿ, ಹತ್ತು ವಾಚ್ ಟವರ್ ಪೂರ್ಣಗೊಂಡಿದೆ ಎಂದರು.

ಬಳಿಕ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ವಿಮಾನ ನಿಲ್ದಾಣ ಪೂರ್ಣವಾಗುತ್ತಿದ್ದಂತೆಯೇ ವಿಮಾನ ಹಾರಾಟ ಪ್ರಾರಂಭವಾಗುತ್ತದೆ. ಇದಕ್ಕೆ ಈಗಾಗಲೇ 10 ಏರ್ಲೈನ್ಸ್‌ಗಳಿಗೆ ಮನವಿ ಮಾಡಿದ್ದೇೆವೆ. ಜಿಲ್ಲೆಯ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಲ್ದಾಣ ಮಾಡಲಾಗಿದೆ ಎಂದು ತಿಳಿಸಿದರು. ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಇದ್ದರು.

ಇದನ್ನೂ ಓದಿ:ನವೆಂಬರ್ ಮಾಸಾಂತ್ಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಜ್ಜು : ಸಂಸದ ಬಿ ವೈ ರಾಘವೇಂದ್ರ

ABOUT THE AUTHOR

...view details